Advertisement

ಗೋವಾದ ಮಹದಾಯಿ ನದಿ ರಕ್ಷಣೆಯಾಗಬೇಕು: ಮಾಜಿ ಸಚಿವ ಪಿ.ಚಿದಂಬರಂ

05:40 PM Nov 20, 2021 | Team Udayavani |

ಪಣಜಿ: ಗೋವಾದಲ್ಲಿ ಪರಿಸರವನ್ನು ರಕ್ಷಣೆ ಮಾಡಿ ಸಕಾರಾತ್ಮಕ ಅಭಿವೃದ್ಧಿಯಾಗಬೇಕು. ಗೋವಾದ ಜೀವದಾಯಿನಿ ಮಹದಾಯಿ ನದಿಯ ರಕ್ಷಣೆಯಾಗಬೇಕು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟರು.

Advertisement

ಮಾಪ್ಸಾದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ “ಮಾಯಗಾಯೆಂಚೊ ಜಾಗರ” ಎಂಬ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕೇಂದ್ರದಲ್ಲಿ ಮತ್ತು ಗೋವಾ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಲಾದರೂ ಜನತೆ ಎಚ್ಚೆತ್ತುಕೊಳ್ಳಬೇಕು. ಇಂಧನ, ಅಡುಗೆ ಅನಿಲ, ಸೇರಿದಂತೆ ಇತರ ಜೀವನಾವಶ್ಯಕ ವಸ್ತುಗಳ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಿ ಜನಸಾಮಾನ್ಯರು ಜೀವನ ನಡೆಸುವುದು ಎಂಬಂತಾಗಿದೆ. ಸರ್ಕಾರವು ಇದೀಗ ಜನರ ಸಹನೆಯನ್ನು ಪರೀಕ್ಷೆ ಮಾಡದೆಯೇ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಬೇಕು. ರಾಜ್ಯದ ಜನತೆ ರಾಜ್ಯ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಿ ಕಾಂಗ್ರೆಸ್ ಪಕ್ಷದ ಕೈಗೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ ಎಂ.ಕೆ.ಶೇಖ್, ಪ್ರಮೋದ ಸಾಳಗಾಂವಕರ್, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next