Advertisement

ಶಿಡ್ಲಘಟ್ಟದಲ್ಲಿ ಸ್ವಸಹಾಯ ಸಂಘಗಳ ಸಮಾವೇಶ: ಮಹಿಳಾ ಸ್ವಾವಲಂಬನೆಯೇ ಗುರಿ: ಹೆಗ್ಗಡೆ

12:37 AM Jul 09, 2022 | Team Udayavani |

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಮಹಿಳೆ ಯರು ಮೂಢನಂಬಿಕೆ ಮತ್ತು ಅಸಹಾಯಕತೆಯಿಂದ ಹೊರ ಬರಬೇಕು. ಅವರು ಸ್ವಸಹಾ ಯದ ಮೂಲಕವೇ ಜೀವನವನ್ನು ರೂಪಿಸಿಕೊಂಡು ಶಿಸ್ತುಬದ್ದ ವ್ಯವಹಾರದಿಂದ ಸ್ವಾವಲಂಬಿಯಾಗಿ ಕುಟುಂಬವನ್ನು ನಿರ್ವಹಿಸಬೇಕು. ಆ ಮೂಲಕ ಆದರ್ಶ ಸಮಾಜ ನಿರ್ಮಾಣವಾಗಬೇಕು ಎಂಬುದೇ ನಮ್ಮ ಆಶಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ತಾಲೂಕಿನ ಬೆಳ್ಳೂಟಿ ಗೇಟ್‌ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯ ವಿತರಣೆ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಇನ್ನೂ ಹಲವು ಮಹಿಳೆಯರು ಮೂಢನಂಬಿಕೆ ಮತ್ತು ಅಸಹಾಯಕತೆ ಯಲ್ಲಿ ಬಳಲುತ್ತಿದ್ದು, ಅದರಿಂದ ಹೊರ ಬರಲು ನಮ್ಮ ಕಾರ್ಯಕರ್ತರು ಅವ ರಿಗೆ ಮಾರ್ಗದರ್ಶನ ಮತ್ತು ನೆರವು ಕಲ್ಪಿಸಲು ಸಿದ್ಧರಿದ್ದಾರೆ ಎಂದರು.
ಬಡತನ ನಿರ್ಮೂಲನೆಯೇ ಗುರಿ ಬಡತನವನ್ನು ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದ ಅವರು, ಮಹಿಳೆಯರು ಮತ್ತು ಪುರುಷರು ಯೋಚನೆ ಮತ್ತು ಯೋಜನೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಪರೋಪಕಾರದಿಂದ ದೇವರ ಪ್ರೀತಿ ಗಳಿಸಬಹುದು ಎಂದರು.

ಹಿರಿಯ ಶಾಸಕ ವಿ. ಮುನಿಯಪ್ಪ, ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌, ಕೋಲಾರ ಸಂಸದ ಎಸ್‌. ಮುನಿಸ್ವಾಮಿ, ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್‌, ಜಿಲ್ಲಾಧಿಕಾರಿ ಆರ್‌. ಲತಾ, ಎಸ್‌ಪಿ ಡಿ.ಎಲ್‌. ನಾಗೇಶ್‌ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾ ಧಿಕಾರಿ ಎಸ್‌.ಎಸ್‌. ಅನಿಲ್‌ಕುಮಾರ್‌ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಉಳಿತಾಯದ ಬಗ್ಗೆ ಲಘುವಾದ
ಧೋರಣೆ ಬೇಡ
ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಕಡ್ಡಾಯವಾಗಿ ವಾರಕ್ಕೊಮ್ಮೆ ಸಭೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಬೇಕು ಹಾಗೂ ಕನಿಷ್ಠ 10 ರೂ. ಆದರೂ ಉಳಿತಾಯ ಮಾಡಬೇಕು. ರಾಜ್ಯದಲ್ಲಿ 50 ಲಕ್ಷ ಸದಸ್ಯರು ತಲಾ 10 ರೂ.ಗಳಂತೆ 2,750 ಕೋಟಿ ರೂ.ಗಳನ್ನು ಉಳಿತಾಯ ಮಾಡಿ ಸಾಧನೆ ಮಾಡಿದ್ದಾರೆ. ಹಾಗಾಗಿ 10 ರೂ.ಗಳನ್ನು ಲಘುವಾಗಿ ಪರಿಗಣಿಸಬಾರದು ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next