ಬೆಂಗಳೂರು: ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನವೇ ತಮ್ಮ ಗುರಿ ಎಂಬುದಾಗಿ ಹಾಕಿ ತಂಡದ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
“ನಮ್ಮ ತಂಡವೀಗ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಕಾರಣ ಆತ್ಮವಿಶ್ವಾಸ ಹೆಚ್ಚಿದೆ.
ಗರಿಷ್ಠ ಸಾಮರ್ಥ್ಯದೊಂದಿಗೆ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲು ಪ್ರಯತ್ನಿಸಲಿದ್ದೇವೆ. ಚಿನ್ನದ ಪದಕವೇ ನಮ್ಮ ಗುರಿ’ ಎಂಬುದಾಗಿ ಹರ್ಮನ್‌ಪ್ರೀತ್ ಹೇಳಿದರು.
“ಗೇಮ್ಸ್‌ಗಾಗಿ ನಮ್ಮ ತಯಾರಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಕೆಲವು ನಿರ್ದಿಷ್ಟ ವಿಭಾಗಗಳಲ್ಲಿ ಸುಧಾರಣೆ ತರಬೇಕಿದೆ. ಪೆನಾಲ್ಟಿ ಕಾರ್ನರ್‌ಗಳನ್ನು ಗೋಲ್ ಆಗಿಸುವುದು ಇವುಗಳಲ್ಲಿ ಮುಖ್ಯವಾದುದು. ಫಿನಿಶಿಂಗ್ ಕೂಡ ಸುಧಾರಣೆ ಕಾಣಬೇಕಿದೆ. ಅಭ್ಯಾಸ ಪಂದ್ಯಗಳು ಈ ನಿಟ್ಟಿನಲ್ಲಿ ನೆರವಿಗೆ ಬರಲಿವೆ’ ಎಂದರು ಹರ್ಮನ್‌ಪ್ರೀತ್.
1998ರ ಕೌಲಾಲಂಪುರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಹಾಕಿಯನ್ನು ಅಳವಡಿಸಿದ ಬಳಿಕ ಈವರೆಗಿನ ಎಲ್ಲ 6 ಕೂಟಗಳಲ್ಲೂ ಆಸ್ಟ್ರೇಲಿಯವೇ ಚಿನ್ನದ ಪದಕ ಗೆದ್ದಿರುವುದು ಉಲ್ಲೇಖನೀಯ. ಭಾರತ ಗೆದ್ದಿರುವುದು 2 ಬೆಳ್ಳಿ ಪದಕ ಮಾತ್ರ.