Advertisement

ಎರಡು ರಾಜ್ಯ: ನಾಳೆ ಮತದಾನ

11:32 PM Feb 12, 2022 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ಪ್ರಿಯಾಂಕಾ ವಾದ್ರಾ, ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಮತ್ತಿತರ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರವನ್ನು ಕಂಡ ಉತ್ತರಾಖಂಡ ಮತ್ತು ಗೋವಾದಲ್ಲಿ ಶನಿವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಫೆ.14ರಂದು ಅಂದರೆ ಸೋಮವಾರ ಈ ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ಮುಕ್ತಾಯವಾಗಲಿದೆ.

Advertisement

ಬಹಿರಂಗ ಪ್ರಚಾರದ ಕೊನೆಯ ದಿನವಾದ ಶನಿವಾರ ಉತ್ತರಾಖಂಡದಲ್ಲಿ ಪ್ರಧಾನಿ ಮೋದಿ, ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪ್ರಚಾರ ರ್ಯಾಲಿ ನಡೆಸಿ ದ್ದಾರೆ. ಮೋದಿ ಅವರು ರುದ್ರಾಪುರದಲ್ಲಿ ಪ್ರಚಾರ ನಡೆಸಿದರೆ, ಯೋಗಿ ತೆಹ್ರಿ ಮತ್ತು ಕೋತ್‌ದ್ವಾರ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ ದ್ದಾರೆ. ರುದ್ರಾಪುರದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, “ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಓಲೈ ಕೆಯ ಅಜೆಂಡಾ ಯಶಸ್ವಿಯಾಗದಂತೆ ನೋಡಿ ಕೊಳ್ಳಿ. ಹಲವು ರಾಜ್ಯಗಳಲ್ಲಿ ಧೂಳೀಪಟವಾಗಿರುವ ವಿಪಕ್ಷವನ್ನು ಇನ್ನಿಲ್ಲವಾಗಿಸಲು ಇದು ಒಳ್ಳೆಯ ಅವಕಾಶ’ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಖತೀಮಾ ಮತ್ತು ಹಲ್‌ದಾÌನಿಯಲ್ಲಿ ರ್ಯಾಲಿ ನಡೆಸಿದ್ದು, ಹಣದುಬ್ಬರ, ನಿರುದ್ಯೋಗ, ರೈತರ ಸಂಕಷ್ಟಗಳನ್ನು ಪ್ರಸ್ತಾವಿಸಿ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಸೋಮವಾರ ಎಲ್ಲ 70 ಅಸೆಂಬ್ಲಿ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮಾ.10ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಬಿಎಸ್‌ಪಿ ವಿರುದ್ಧ ಅಖೀಲೇಶ್‌ ಕಿಡಿ :

ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಶನಿವಾರ ಏಕಾಏಕಿ ಬಿಎಸ್‌ಪಿ ವಿರುದ್ಧ ತಮ್ಮ ಕೋಪ ಪ್ರದರ್ಶಿಸಿದ್ದಾರೆ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ತತ್ತಾ$Ìದರ್ಶಗಳಿಂದ ದೂರ ಸಾಗಿರುವ ಪಕ್ಷವೊಂದು ಈ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ನಾವು(ಎಸ್‌ಪಿ) ಸೋಲಿಸಬಾರದು ಎಂಬ ಏಕೈಕ ಉದ್ದೇಶದೊಂದಿಗೆ ಕಣಕ್ಕಿಳಿದಿದೆ ಎಂದು ಬಿಎಸ್ಪಿ ಹೆಸರೆ ತ್ತದೇ ವಾಗ್ಧಾಳಿ ನಡೆಸಿದ್ದಾರೆ. ಜತೆಗೆ ರಾಜ್ಯದಲ್ಲಿ ಬದಲಾವಣೆ ಆಗ ಬೇಕೆಂದರೆ ಎಲ್ಲ ಸಮಾಜ ವಾದಿಗಳು ಮತ್ತು ಅಂಬೇಡ್ಕರ್‌ವಾದಿಗಳು ಕೈಜೋಡಿಸಬೇಕು ಎಂದಿದ್ದಾರೆ.

Advertisement

ರಾಜ್ಯದಲ್ಲಿ 2ನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಶನಿವಾರವೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಕನ್ನೌಜ್‌ ನಲ್ಲಿ ಪ್ರಧಾನಿ ಮೋದಿ ರ್ಯಾಲಿ ನಡೆಸಿ, ವಿಪಕ್ಷ ಗಳ ವಿರುದ್ಧ ವಾಕ್‌ಪ್ರಹಾರ ಮಾಡಿದ್ದಾರೆ.

ಸಂತ್ರಸ್ತೆಯ ತಾಯಿಯ ಭೇಟಿ: ಎಸ್‌ಪಿ ನಾಯಕನ ಆಶ್ರಮದಲ್ಲಿ ಶವ ವಾಗಿ ಪತ್ತೆ ಯಾದ ದಲಿತ ಯುವ ತಿಯ ತಾಯಿಯೊಂದಿಗೆ ಶನಿ ವಾರ ಪ್ರಿಯಾಂಕಾ ವಾದ್ರಾ ಮಾತುಕತೆ ನಡೆಸಿದ್ದಾರೆ. ಮಗಳಿಗೆ ನ್ಯಾಯ ಒದಗಿಸುವ ಹೋರಾಟದಲ್ಲಿ ನಿಮ್ಮೊಂದಿಗೆ ನಾವಿರುವುದಾಗಿ ಭರವಸೆ ನೀಡಿದ್ದಾರೆ.

3ನೇ ಪೋಸ್ಟರ್‌ ಗರ್ಲ್ ಬಿಜೆಪಿಗೆ: ಕಾಂಗ್ರೆಸ್‌ನ “ಲಡ್‌ಕೀ ಹೂಂ, ಲಡ್‌ ಸಕ್ತೀ ಹೂಂ’ ಅಭಿಯಾನದ 3ನೇ ಪೋಸ್ಟರ್‌ ಗರ್ಲ್ ಪಲ್ಲವಿ ಸಿಂಗ್‌ ಕೂಡ ಬಿಜೆಪಿಗೆ ಸೇರಿದ್ದಾರೆ. ಈ ಹಿಂದೆ ಪ್ರಿಯಾಂಕಾ ಮೌರ್ಯ ಮತ್ತು ವಂದನಾ ಸಿಂಗ್‌ ಕೇಸರಿ ಪಕ್ಷ ಸೇರಿದ್ದರು.

ರಾಹುಲ್‌ಗೇನು ಗೊತ್ತು? :

ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಪುನರಾರಂಭಿಸುತ್ತೇವೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಘೋಷಣೆ ವಿರುದ್ಧ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಸಿಡಿದೆದ್ದಿದ್ದಾರೆ. ಗಣಿ ಹಗರಣದ ಕುರಿತು ರಾಹುಲ್‌ ಅವರಿಗೆ ಏನೂ ಗೊತ್ತಿಲ್ಲ. ಮೊದಲು ಅವರು ಈ ವಿಷಯದ ಬಗ್ಗೆ ಅಧ್ಯಯನ ನಡೆಸಲಿ ಎಂದು ಸಾವಂತ್‌ ಹೇಳಿದ್ದಾರೆ.

ಬಿಜೆಪಿ ವಕ್ತಾರನಿಗೆ  ಉಚ್ಚಾಟನೆ ಶಿಕ್ಷೆ  :

ಮಣಿಪುರ ಬಿಜೆಪಿಯು ತನ್ನ ಮುಖ್ಯ ವಕ್ತಾರ ಚೋಂಗುತಾಮ್‌ ಬಿಜೋಯ್‌ ಸಿಂಗ್‌ರನ್ನು ಶನಿವಾರ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಪಕ್ಷದ ನಿಯಮಾವಳಿಗಳನ್ನು ಉಲ್ಲಂ ಸಿದ್ದಕ್ಕೆ ಈ ಶಿಕ್ಷೆ ಎಂದೂ ಹೇಳಿದೆ. ಶುಕ್ರವಾರವಷ್ಟೇ ಸಿಂಗ್‌ ಅವರು ಬಿಜೆಪಿಯ ಮಿತ್ರಪಕ್ಷವಾದ ಎನ್‌ಪಿಪಿಯನ್ನು “ಪರಾವಲಂಬಿ ಜೀವಿ’ ಎಂದು ಹೀಗಳೆದಿದ್ದರು.

ಕಚ್ಚಾಟದ ಸುದ್ದಿ ತಳ್ಳಿಹಾಕಿದ ಸಿಧು! :

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ ಎಂಬ ಆರೋಪವನ್ನು ಪಕ್ಷದ ರಾಜ್ಯಾಧ್ಯಕ್ಷ ನವಜೋತ್‌ ಸಿಂಗ್‌ ಸಿಧು ತಳ್ಳಿಹಾಕಿದ್ದಾರೆ. ಜತೆಗೆ ಚ‌ನ್ನಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿರುವ ರಾಹುಲ್‌ ಗಾಂಧಿ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಹೈಕಮಾಂಡ್‌ ನಿರ್ಧಾರವನ್ನು ಎಲ್ಲರೂ ಒಪ್ಪಿದ್ದಾರೆ ಎಂದೂ ಹೇಳಿದ್ದಾರೆ.

ರ್ಯಾಲಿ ನಿರ್ಬಂಧ ಮತ್ತಷ್ಟು ಸಡಿಲಿಕೆ :

ಪಂಚರಾಜ್ಯಗಳ ಚುನಾವಣ ರ್ಯಾಲಿಗಳಿಗೆ ಹೇರಿದ್ದ ನಿರ್ಬಂಧವನ್ನು ಚುನಾವಣ ಆಯೋಗ ಶನಿವಾರ ಮತ್ತಷ್ಟು ಸಡಿಲಿಸಿದೆ. ಅದರಂತೆ ಪ್ರಚಾರಕ್ಕಿ ರುವ ನಿರ್ಬಂಧದ ಅವಧಿಯನ್ನು ರಾತ್ರಿ 10ರಿಂದ ಬೆಳಗ್ಗೆ 6 ಎಂದು ಪರಿಷ್ಕರಿಸಲಾಗಿದೆ. ಈವರೆಗೆ ರಾತ್ರಿ 8ರಿಂದ ಬೆ.8ರ ವರೆಗೆ ಪ್ರಚಾರ ನಡೆಸುವಂತಿರಲಿಲ್ಲ. ಇನ್ನು ಮುಂದೆ, ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರ ಆಸನ ಸಾಮರ್ಥ್ಯದೊಂದಿಗೆ ಸಾರ್ವಜನಿಕ ಸಭೆ ಅಥವಾ ರ್ಯಾಲಿ ನಡೆಸಬಹುದು. ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ನಿಗದಿಪಡಿಸಿರುವ ಸಂಖ್ಯೆಯ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದೂ ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next