Advertisement
ಗೋವಾದ ಬೀಚ್‍ಗಳಲ್ಲಿ ಡಿಸೆಂಬರ್ 24 ರಿಂದ ಜನವರಿ 2 ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶಿಯ ಪ್ರವಾಸಿಗರು ಆಗಮಿಸುತ್ತಿದ್ದರು. ಈ ನಂತರ ಕರೋನಾ ಭೀತಿಯ ಹಿನ್ನೆಲೆಯಲ್ಲಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸದ್ಯ ಗೋವಾದಲ್ಲಿ ಪ್ರವಾಸಿಗರು ಸಂಪೂರ್ಣ ಖಾಲಿಯಾಗಿದ್ದಾರೆ. ಗೋವಾದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಮತ್ತು ವಿವಿಧ ರಾಜ್ಯಗಳಲ್ಲಿ ಕರೋನಾ ನಿರ್ಬಂಧ ಹೆಚ್ಚಾಗುತ್ತಿದ್ದಂತೆಯೇ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಪ್ರವಾಸೋದ್ಯಮ ಅವಲಂಭಿತ ಎಲ್ಲ ಉದ್ಯೋಗಗಳು ಸಂಪೂರ್ಣ ಬಂದ್ ಆಗಿದೆ.
Related Articles
Advertisement
ಪ್ರತಿ ವರ್ಷ ಗೋವಾ ರಾಜ್ಯದಲ್ಲಿ ಅಕ್ಟೊಬರ್ ನಿಂದ ಏಪ್ರಿಲ್ ವರೆಗೆ ಪ್ರವಾಸೋದ್ಯಮ ಸೀಜನ್ ಆಗಿರುವುದರಿಂದ ದೇಶ ವಿದೇಶಿಯ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷವೂ ಕೂಡ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಗಳು ಭಾರಿ ನಷ್ಠ ಅನುಭವಿಸುವಂತಾಗಿದೆ. ಇಷ್ಟೇ ಅಲ್ಲದೆಯೇ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಕೂಡ ಕೆಲಸ ಕಳೆದುಕೊಳ್ಳುವಂತಾಗಿದೆ.