ಪಣಜಿ: ಗೋವಾ ರಾಜ್ಯದಲ್ಲಿ ಶೇ 100 ರಷ್ಟು ಕೋವಿಡ್ ಲಸಿಕಾ ಕಾರ್ಯ ಪೂರ್ಣಗೊಳ್ಳದ ಹೊರತು ಪ್ರವಾಸೋದ್ಯಮವನ್ನು ಆರಂಭಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಪಣಜಿ ಸಮೀಪದ ಸಾಂತಕ್ರೂಜ್‍ನಲ್ಲಿ ಪೋಲಿಸ್ ಠಾಣೆಯ ಉಧ್ಘಾಟನೆ ನೆರವೇರಿಸಿ ಮಾತನಾಡಿದ ಅವರು- ಗೋವಾದಲ್ಲಿ ನೂರಕ್ಕೇ ನೂರರಷ್ಟು ಜನರಿಗೆ ಕೋವಿಡ್‍ನ ಮೊದಲ ಲಸಿಕೆ ಪೂರ್ಣಗೊಳ್ಳುವ ವರೆಗೂ ಪ್ರವಾಸೋದ್ಯ ಆರಂಭಿಸಲು ಸಾಧ್ಯವಿಲ್ಲ, ನಾವು ಈ ವಿಷಯದಲ್ಲಿ ಹೆಚ್ಚಿನ ಸಮಸ್ಯೆಯನ್ನು ತಂದುಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ 18-44 ವರ್ಷದ ಎಲ್ಲರಿಗೂ ಜುಲೈ 30 ರ ಒಳಗೆ ಕೋವಿಡ್ ಲಸಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.
ಇದನ್ನೂ ಓದಿ:ರಾಜ್ಯಪಾಲರು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು: ಸಿದ್ದರಾಮಯ್ಯ
ರಾಜಕೀಯ ವಿರೋಧಿಗಳು ಕೋವಿಡ್-19 ಕಾನೂನು ವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗೋವಾದ ಹೆಸರು ಹಾಳುಮಾಡುತ್ತಿದ್ದಾರೆ. ಟ್ವೀಟರ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟಗಳನ್ನು ಹಾಕುಲ ಮೂಲಕ ಗೋವಾ ರಾಜ್ಯದ ಹೆಸರು ಹಾಳುಮಾಡಲಾಗುತ್ತಿದೆ.
ಇಂತಹ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಜನರು ಪಾಠ ಕಲಿಸಲಿದ್ದಾರೆ ಎಂದ ಮುಖ್ಯಮಂತ್ರಿ ಸಾವಂತ್-ಕೋವಿಡ್ ಸಂಖ್ಯೆ ಹೆಚ್ಚುತ್ತಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಆಮ್ಲಜನಕ ಬೇಡಿಕೆ ಬಹುಪಟ್ಟು ಹೆಚ್ಚಾಗಿರುವುದನ್ನು ಯಾರೂ ಊಹಿಸಿರಲಿಲ್ಲ. ಆದರೆ ಸರ್ಕಾರವು ಈ ಸಮಸ್ಯೆಯನ್ನು ಎರಡು ದಿನಗಳಲ್ಲಿ ಬಗೆಹರಿಸಿದೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು. ಈ ಸಂದರ್ಭದಲ್ಲಿ ಶಾಸಕ ಟೋನಿ ಫರ್ನಾಂಡೀಸ್, ಪೋಲಿಸ್ ಇಲಾಖೆಯ ಹಿರೀಯ ಅಧಿಕಾರಿಗಳು ಉಪಸ್ಥಿತರಿದ್ದರು.