Advertisement
ದೇಶದಲ್ಲಿ ಹುಲಿಗಳ ಸಂಖ್ಯೆಯ ಪರಿಸ್ಥಿತಿ ಉತ್ತಮವಾಗಿದ್ದರೂ ಗೋವಾದಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದ್ದು,ಇಲ್ಲಿನ ಮಹದಾಯಿ ಮತ್ತು ಮೋಲೆಮ್ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದೆ.
Related Articles
Advertisement
ಅರಣ್ಯನಾಶ, ಅರಣ್ಯಗಳಲ್ಲಿ ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳು ಇದರ ಹಿಂದಿನ ಕಾರಣಗಳು. ಇತ್ತೀಚಿನ ಮಾಹಿತಿಯ ಪ್ರಕಾರ, ಪಶ್ಚಿಮ ಘಟ್ಟಗಳ ಕೆಲ ಭಾಗಗಳನ್ನು ಹೊರತುಪಡಿಸಿ ಹುಲಿಗಳ ಆವಾಸಸ್ಥಾನವು ಕ್ಷೀಣಿಸುತ್ತಿದೆ. ದಾಂಡೇಲಿಯಲ್ಲಿ ಹುಲಿ ಚಟುವಟಿಕೆ ಹೆಚ್ಚಿದ್ದರೂ ಗಡಿ ಭಾಗದಲ್ಲಿ ಹುಲಿಗಳ ಹಾವಳಿ ಕಡಿಮೆಯಾಗಿದೆ.
ಹುಲಿ ಗಣತಿಗಾಗಿ, ಭಾರತದಲ್ಲಿನ ಆವಾಸಸ್ಥಾನಗಳನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಶಿವಾಲಿಕ್-ಗಂಗಾ ಬಯಲು, ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳು, ಪಶ್ಚಿಮ ಘಟ್ಟಗಳು, ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ನದಿಯ ಕಣಿವೆಗಳು ಮತ್ತು ಸುಂದರಬನ್ಸ್ ಹೀಗೆ ಐದು ಭಾಗಗಳಾಗಿ ವಿಂಗಡಿಸಲಾಗಿದೆ.
ಪಶ್ಚಿಮ ಘಟ್ಟಗಳು ಅತ್ಯಧಿಕ ಜೀವವೈವಿಧ್ಯತೆಯನ್ನು ಹೊಂದಿವೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಅಭಿವೃದ್ಧಿಯ ಪ್ರಕ್ರಿಯೆಯು ವನ್ಯಜೀವಿಗಳು ಮತ್ತು ಮಾನವರ ನಡುವೆ ಹೆಚ್ಚುತ್ತಿರುವ ಸಂಘರ್ಷಗಳಿಗೆ ಕಾರಣವಾಗಿದೆ.
2018 ರ ಹೊತ್ತಿಗೆ, ಹುಲಿಗಳ ಸಂಖ್ಯೆ 981 ಆಗಿತ್ತು. ಆದರೆ 2022 ರಲ್ಲಿ ಇದು 824ಕ್ಕೆ ಇಳಿಕೆಯಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಶಿಫಾರಸುಗಳ ಹೊರತಾಗಿಯೂ ಸಂರಕ್ಷಿತ ಪ್ರದೇಶದಲ್ಲಿ ಗೋವಾ ಇನ್ನೂ ಹುಲಿ ಯೋಜನೆಯನ್ನು ಅಭಿವೃದ್ಧಿಪಡಿಸಿಲ್ಲ.
ಗೋವಾದ ಮೊಲೆಮ್-ಮಹದಾಯಿಯಲ್ಲಿ ಹುಲಿ ಯೋಜನೆಗೆ ಶಿಫಾರಸು ಮಾಡಿದ್ದರೂ ಇನ್ನೂ ಜಾರಿಗೆ ಬಂದಿಲ್ಲ. ಹುಲಿ ಯೋಜನೆ ಇನ್ನೂ ಕಾಗದದಲ್ಲಿಯೇ ಉಳಿದುಕೊಂಡಿರುವಂತಾಗಿದೆ.