ಪಣಜಿ: ರಾಜ್ಯ ಗಣಿ ಇಲಾಖೆಯು ರಾಜ್ಯದಲ್ಲಿನ 88 ಗಣಿಗಳ ಪರವಾನಗಿ ನವೀಕರಣಗೊಳಿಸಿರುವುದನ್ನು ಅಕ್ರಮ ಎಂದು ಪರಿಗಣಿಸಿ ಸರ್ವೋಚ್ಛ ನ್ಯಾಯಾಲಯವು ಅದನ್ನು ರದ್ಧುಗೊಳಿಸಿದ ನಂತರ ಗೋವಾ ಸರ್ಕಾರವು ಹೊಸದಾಗಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.
ಈ ಕುರಿತು ರಾಜ್ಯದ ಅಡ್ವಕೇಟ್ ಜನರಲ್ ದೇವಿದಾಸ್ ಪಾಂಗಮ್ ಮಾಹಿತಿ ನೀಡಿದ್ದಾರೆ. ಸರ್ವೋಚ್ಛ ನ್ಯಾಯಾಲಯವು ಗೋವಾ ಸರ್ಕಾರದ ಅರ್ಜಿ ವಜಾಗೊಳಿಸಿರುವುದರಿಂದ ಗೋವಾ ರಾಜ್ಯದಲ್ಲಿ ಗಣಿಗಾರಿಕೆ ಪು ನರಾರಂಭಗೊಳ್ಳಲು ಮತ್ತೆ ವಿಘ್ನ ಎದುರಾಗಿದೆ.
ಗೋವಾ ರಾಜ್ಯದಲ್ಲಿನ 88 ಗಣಿಗಳ ಲೀಸ್ ನವೀಕರಣವನ್ನು ಸರ್ವೋಚ್ಛ ನ್ಯಾಯಾಲಯವು ಅಕ್ರಮ ಎಂದು ಪರಿಗಣಿಸಿದ ನಂತರ ರಾಜ್ಯ ಸರ್ಕಾರವು ಈ ಪ್ರಕರಣದ ಮರು ಪರಿಶೀಲನೆ ನಡೆಸುವ ಕುರಿತಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ಸರ್ವೋಚ್ಛ ನ್ಯಾಯಾಲಯವು ಈ ಅರ್ಜಿಯವನ್ನು ವಜಾಗೊಳಿಸಿದೆ. ಇದರಿಂದಾಗಿ ಗೋವಾ ಸರ್ಕಾರಕ್ಕೆ ಭಾರಿ ಪೆಟ್ಟುಬಿದ್ದಂತಾಗಿದೆ. ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಗೊಳಿಸಲು ಸರ್ಕಾರ ನಡೆಸುತ್ತಿದ್ದ ಪ್ರಯತ್ನ ಮತ್ತೆ ವ್ಯರ್ಥವಾದಂತಾಗಿದೆ.
ಗೋವಾದ ಆರ್ಥಿಕತೆಯ ಪ್ರಮುಖ ಆಧಾರವಾಗಿರುವ ಗಣಿಗಾರಿಕೆ ಕಳೆದ ಹಲವು ವರ್ಷಗಳಿಂದ ಬಂದ್ ಆಗಿದೆ.
ರಾಜ್ಯದಲ್ಲಿರುವ ಗಣಿಗಾರಿಕೆ ಅವಲಂಭಿತ ಉದ್ಯೋಗಿಗಳು ಮತ್ತು ಕಾರ್ಮಿಕರು ಹಲವು ಬಾರಿ ಪ್ರತಿಭಟನೆ ನಡೆಸಿದ ನಂತರ ಸರ್ಕಾರ ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಿಸಲು ಕೈಗೊಂಡ ಪ್ರಯತ್ನ ಮತ್ತೆ ವಿಘ್ನ ಎದುರಾದಂತಾಗಿದೆ.