Advertisement

ಗೋವಾ : ಸಂತ ಫ್ರಾನ್ಸಿಸ್ ಜೇವಿಯರ್ ರವರ 9 ದಿನಗಳ ಪ್ರಾರ್ಥನಾ ಸಭೆ

06:23 PM Nov 29, 2021 | Team Udayavani |

ಪಣಜಿ: ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಓಲ್ಡಗೋವಾದಲ್ಲಿರುವ ಸಂತ ಫ್ರಾನ್ಸಿಸ್ ಜೇವಿಯರ್ ರವರ 9 ದಿನಗಳ ಪ್ರಾರ್ಥನಾ ಸಭೆಯು ನೊವೆಂಬರ್ 24 ರಿಂದ ಆರಂಭಗೊಂಡಿದ್ದು ಡಿಸೆಂಬರ್ 3 ರಂದು ಫೆಸ್ಟ್ ಸಮಾರೋಪಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 3 ರಂದು ವಿಶೇಷ ಪ್ರಾರ್ಥನಾ ಸಭೆಗಳು ನಡೆಯಲಿದೆ.

Advertisement

ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸಂತ್ ಫ್ರಾನ್ಸಿಸ್ ಜೇವಿಯರ್ ಫೆಸ್ಟ್ ನ ಪ್ರಾರ್ಥನಾ ಸಭೆಗಳಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 3 ರಂದು ಫೆಸ್ಟ್ ಆಚರಿಸಲು ಚರ್ಚ್ ನಿರ್ಧರಿಸಿದೆ.

ಡಿಸೆಂಬರ್ 3 ರಂದು ಬೆಳಿಗ್ಗೆ ಸಂತ ಫ್ರಾನ್ಸಿಸ್ ಜೇವಿಯರ್ ಫೆಸ್ಟ್ ನ ವಿಶೇಷ ಪ್ರಾರ್ಥನಾ ಸಭೆ ಆರಂಭಗೊಳ್ಳಲಿದ್ದು , ಅಂದು ಸಂಜೆ ಕೂಡ ಪ್ರಾರ್ಥನಾ ಸಭೆಗಳು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next