Advertisement

ಗೋವಾ: ಖೈದಿಗಳಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಜೈಲು ಸಿಬ್ಬಂದಿ ಬಂಧನ

11:03 PM Jun 23, 2022 | Team Udayavani |

ಪಣಜಿ: ಜೈಲು ಖೈದಿಗಳಿಗೆ ಮಾದಕ ದ್ರವ್ಯ ಕೊಕೇನ್ ಪೂರೈಸುತ್ತಿದ್ದ ಆರೋಪದ ಅಡಿಯಲ್ಲಿ ಕೋಲ್ವಾ ಜೈಲಿನಲ್ಲಿ ಜೈಲು ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸೂರಜ್ ಗಾವಡೆಯನ್ನು ಪೋಲಿಸರು ಬಂಧಿಸಿದ್ದಾರೆ.

Advertisement

ಕೋಲ್ವಾ ಪೋಲಿಸರು ಈ ಕುರಿತು ಮಾಹಿತಿ ನೀಡಿ, ಜೈಲು ಸಿಬ್ಬಂದಿಗಳು ಪಿಐ ಪ್ರಶಾಂತ ಜೋಶಿ ರವರ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಜೈಲು ಸಿಬ್ಬಂದಿ ಅನುಮಾನಾಸ್ಪದವಾಗಿ  ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಈ ಕುರಿತಂತೆ ಪಿಐ ಸುಶಾಂತ್ ಜೋಶಿ ನೇತೃತ್ವದ ತಂಡ ಮಾಪ್ಸಾ ಪೋಲಿಸರಿಗೆ ಮಾಹಿತಿ ನೀಡಿದ ನಂತರ ಕೋಲ್ವಾ ಪೋಲಿಸರು ಜೈಲು ಸಿಬ್ಬಂದಿ ಸೂರಜ್ ಗಾವಡೆಯನ್ನು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next