Advertisement

New Year Party: ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ಗೋವಾ ಸಜ್ಜು

12:16 PM Dec 07, 2023 | |

ಪಣಜಿ: ಹೊಸ ವರ್ಷ ಮತ್ತು ಕ್ರಿಸ್‍ಮಸ್ ಹಬ್ಬದ ಸಂಭ್ರಮಾಚರಣೆಯ ಹಿನ್ನೆಲೆ ಮುಂದಿನ ವಾರದಿಂದ ಗೋವಾಕ್ಕೆ ಪ್ರವಾಸಿಗರ ಆಗಮನ ಹೆಚ್ಚಾಗುವ ಸಾಧ್ಯತೆಯಿದೆ. ಗೋವಾದಲ್ಲಿನ ಹೋಟೆಲ್‍ಗಳು ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ಪಾರ್ಟಿಗಳಿಗೆ ಸಜ್ಜಾಗುತ್ತವೆ.

Advertisement

ಗೋವಾ ಟ್ರಾವೆಲ್ ಮತ್ತು ಟೂರಿಸಂ ಅಸೋಸಿಯೇಷನ್ ಅಧ್ಯಕ್ಷ ನಿಲೇಶ್ ಶಾ ಮಾತನಾಡಿ, ಡಿಸೆಂಬರ್ 15 ರಿಂದ ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಆಚರಣೆಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಬರಲು ಪ್ರಾರಂಭಿಸುತ್ತಾರೆ. ಆಗ ಪ್ರವಾಸಿಗರ ಸಂಖ್ಯೆಯು ಈ ಪ್ರವಾಸಿ ಋತುವಿನ ಉತ್ತುಂಗವನ್ನು ತಲುಪುತ್ತದೆ ಎಂದು ಹೇಳಿದರು.

ಸದ್ಯ ಗೋವಾದಲ್ಲಿ ದೇಶಿಯ ಪ್ರವಾಸಿಗರ ಸಂಖ್ಯೆ ಉತ್ತಮವಾಗಿದ್ದು, ವಿಶ್ವದ ಕೆಲ ದೇಶಗಳಲ್ಲಿನ ಯುದ್ಧ ಪರಿಸ್ಥಿತಿ ಗಮನಿಸಿದರೆ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನದ ಬಗ್ಗೆ ಅನುಮಾನಗಳಿವೆ. ಆದರೆ ಇನ್ನೂ ಚಾರ್ಟರ್ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ ಮತ್ತು ಕೆಲ ವಿದೇಶಿ ಪ್ರವಾಸಿಗರು ನಿಗದಿತ ವಿಮಾನಗಳಲ್ಲಿ ಗೋವಾಕ್ಕೆ ಬರುತ್ತಾರೆ ಎಂದು ಅವರು ಹೇಳಿದರು.

ಕಡಲತೀರದಲ್ಲಿ ಶಾಕ್‍ಗಳನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರನ್ನು ಸ್ವಾಗತಿಸಲು ರಾಜ್ಯ ಸಜ್ಜಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಋತುವೂ ಗೋವಾ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಸದ್ಯ ಬೀಚ್‍ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಅದಕ್ಕಾಗಿಯೇ ಪ್ರವಾಸಿಗರು ಸುರಕ್ಷಿತವಾಗಿರಲು ನಾವು ಸಲಹೆ ನೀಡುತ್ತೇವೆ ಎಂಬ ಮಾಹಿತಿ ನೀಡಿದರು.

Advertisement

ಶಾಕ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕ್ರೂಜ್ ಕಾರ್ಡೋಸೊ ಮಾತನಾಡಿ, ದಕ್ಷಿಣ ಗೋವಾ ಜಿಲ್ಲೆಯಲ್ಲಿ ಪ್ರವಾಸಿಗರ ಆಗಮನ ತುಲನಾತ್ಮಕವಾಗಿ ಕಡಿಮೆಯಾಗಿದೆ. ಬೀಚ್ ಷಾಕ್‍ಗಳನ್ನು ಸ್ಥಾಪಿಸುವಲ್ಲಿನ ವಿಳಂಬವು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಕ್ರಿಸ್‍ಮಸ್-ಹೊಸ ವರ್ಷದ ವಾರದಲ್ಲಿ ಶಾಕ್ ಮಾಲೀಕರು ಉತ್ತಮ ವ್ಯಾಪಾರಕ್ಕಾಗಿ ಆಶಿಸುತ್ತಿದ್ದಾರೆ. ಕೋಲ್ವಾ, ಬಾಣಾವಲಿ, ಮಜೋರ್ಡಾ, ಉತ್ತರ ಗೋವಾದ ಪಲೋಲ್ ಮತ್ತು ಅಗೋಂದಾ ಕಡಲತೀರಗಳು ದಕ್ಷಿಣ ಗೋವಾದಲ್ಲಿದ್ದರೆ, ಉತ್ತರ ಗೋವಾದ ಕಲಂಗುಟ್, ಬಾಗಾ, ಹರ್ಮಲ್, ಆಶ್ವೆ, ಹಣಜುಣ ಮತ್ತು ಮೊರ್ಜಿ ಬೀಚ್‍ಗಳು  ಪ್ರವಾಸಿಗರ ಆಕರ್ಷಣೆಗೆ ಹೆಸರುವಾಸಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next