ಗೋವಾ ರಾಜ್ಯ ಸರ್ಕಾರವು ಕೂಡ ರಾಜ್ಯದಲ್ಲಿ ವ್ಯಾಟ್ ತೆರಿಗೆಯನ್ನು 7 ರೂ ಇಳಿಕೆ ಮಾಡಿದೆ. ಇದರಿಂದಾಗಿ ಗೋವಾ ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ 12 ರೂ ಮತ್ತು ಡೀಸೆಲ್ ದರದಲ್ಲಿ 17 ರೂ ಇಳಿಕೆಯಾದಂತಾಗಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ”ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಿದ್ದು, ಇದಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಭಾರಿಯಾಗಿದ್ದೇನೆ. ಗೋವಾ ರಾಜ್ಯ ಸರ್ಕಾರವು ಕೂಡ ಪೆಟ್ರೋಲ್ ಡೀಸೆಲ್ ದರವನ್ನು ಇಳಿಕೆ ಮಾಡುವ ನಿರ್ಣಯ ತೆಗೆದುಕೊಂಡಿದೆ. ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 7 ರೂ ಇಳಿಕೆ ಮಾಡಿದೆ” ಎಂದು ತಿಳಿಸಿದರು.