ಪಣಜಿ: ಗೋವಾದಲ್ಲಿ ಒಬ್ಬ ಪಾಕಿಸ್ತಾನ ಮೂಲ ನಾಕರೀಕನೋರ್ವನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸದ್ಯ ಈತನಿಗೆ ಗೋವಾದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಪಾಸಿಟಿವ್ ಸ್ಟೋರಿ : ಕೋವಿಡ್ ಗೆದ್ದ ಒಂದೇ ಕುಟುಂಬದ 16 ಮಂದಿ..!
ಗೋವಾದಲ್ಲಿ ಹಲವು ಜನ ವಿದೇಶಿಗರಿಗೂ ಕೂಡ ಕೋವಿಡ್ ಸೊಂಕು ದೃಢಪಟ್ಟಿದ್ದು ಮಾಪ್ಸಾದ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಲು ಸ್ಥಳದ ಅಭಾವದ ಕಾರಣ ಗೋವಾದ ಇತರೆ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸೋಂಕಿನ ಲಕ್ಷಣಗಳಿಲ್ಲದ ಮೂವರು ವಿದೇಶಿ ನಾಗರೀಕರಿಗೆ ಗೋವಾದ ಬಿಚೋಲಿಯ ಕೇಶವ ಸೇವಾ ಸಾಧನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ, ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಸೊಂತರ ಪೈಕಿ ಒಬ್ಬ ಪಾಕಿಸ್ತಾನದ ನಾಗರೀಕನೂ ಒಳಗೊಂಡಿದ್ದಾನೆ ಎಂದು ಹಿರೀಯ ವೈದ್ಯ ಡಾ. ಶೇಖರ್ ಸಾಳಕರ್ ಮಾಹಿತಿ ನೀಡಿದ್ದಾರೆ.
ಗೋವಾ ಸರ್ಕಾರದ ಸೂಚನೆಯ ಅನುಸಾರ ರಾಜ್ಯದ 20 ರಿಂದ 22 ಖಾಸಗಿ ಆಸ್ಪತ್ರೆಯ ವೈದ್ಯರು ಕೋವಿಡ್ ಆಸ್ಪತ್ರೆ ಅಥವಾ ತಪಾಸಣಾ ಪೂರ್ವ ಕೇಂದ್ರದಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬ ಖಾಸಗಿ ವೈದ್ಯರು ತಮಗೆ ನೀಡಿರುವ ಕೋವಿಡ್ ಆಸ್ಪತ್ರೆಯಲ್ಲಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪ್ರತಿದಿನ ಒಂದು ಭಾರಿಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲೇಬೇಕಾಗಿದೆ ಎಂದು ಸಾಳಕರ್ ಹೇಳಿದ್ದಾರೆ.
ಇದನ್ನೂ ಓದಿ : ದತ್ತು ತುಗಾಂವಕರ್ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ, ಸಾಂತ್ವನ