ಪಣಜಿ : ಸತ್ಯ ಪರಿಸ್ಥಿತಿ ಬೆರೇಯೆ ಇರುವಾಗ ಬಿಜೆಪಿ ಸರ್ಕಾರವು ಜನತೆಗೆ ಸುಳ್ಳು ಮಾಹಿತಿ ನೀಡಿ ತನ್ನ ಕೆಲಸ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಗೋವಾದಲ್ಲಿ ಶೇಕಡಾ 100 ರಷ್ಟು ಕೋವಿಡ್ ಲಸಿಕೆ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆ ಸುದ್ದಿ: ಪ್ರತಿಕ್ರಿಯೆ ನೀಡಿದ ಬಿಸಿಸಿಐ
ಮಡಗಾಂವನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ಜನರು ಕೋವಿಡ್ ಮೊದಲ ಲಸಿಕೆಯನ್ನೂ ಪಡೆದುಕೊಂಡಿಲ್ಲ, ಇದು ಸತ್ಯ ಪರಿಸ್ಥಿತಿಯಾಗಿದೆ ಎಂದಿದ್ದಾರೆ.
ಆದರೆ ಸರ್ಕಾರ ಮಾತ್ರ ರಾಜ್ಯದಲ್ಲಿ ಶೇಕಡಾ 100 ರಷ್ಟು ಲಸಿಕೆ ಪೂರ್ಣಗೊಂಡಿದೆ ಎಂದು ಸರ್ಕಾರ ಹೇಳುತ್ತಿದೆ. ಸುಳ್ಳು ಹೇಳುವುದು ಬಿಜೆಪಿ ಹೆಸರಲ್ಲೇ ಸೇರಿಕೊಂಡಿದೆ. ಬಿಜೆಪಿಯು ಪ್ರತಿಯೊಂದು ಸಂದರ್ಭವನ್ನೂ ವಳಸಿಕೊಳ್ಳಲು ಯೋಚಿಸುತ್ತದೆ ಎಂದು ದಿಗಂಬರ್ ಕಾಮತ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಮುಂದಿನ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ