ಪಣಜಿ : ಭಾರತದ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಸಂಸ್ಥಾಪಕ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ರವರಿಂದ ದೇಶದ ರಾಜಕಾರಣಕ್ಕೆ ದೊಡ್ಡ ಕೊಡುಗೆಯಿದೆ. ಅವರ ಕರ್ತೃತ್ವ ಹಾಗೂ ನೇತೃತ್ವವನ್ನು ಎಂದೂ ಮರೆಯಲು ಸಾಧ್ಯವಿಲ್ಲ.ಅವರ ನೇತೃತ್ವದ ಭಾರತವನ್ನು ಎಂದೂ ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ರವರ ಮೂರನೇಯ ಪುಣ್ಯ ತಿಥಿಯ ಅಂಗವಾಗಿ ಪಣಜಿಯ ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಆದಾರಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸದಾನಂದ ತಾನಾವಡೆ ರವರು ವಾಜಪೇಯಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ : ಭಾರತದ ಸೂಪರ್ ಪವರ್ ಕನಸು ನನಸಾಗಲಿದೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಇಂದು ನಾವು ದೇಶದಲ್ಲಿ ಕಾಣುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ದಿ.ವಾಜಪೇಯಿ ರವರ ಅಧಿಕಾರಾವಧಿಯಲ್ಲಿಯೇ ಆರಂಭಗೊಳಿಸಲಾಗಿತ್ತು. ವಾಜಪೇಯಿ ರವರು ಒಬ್ಬ ಉತ್ತಮ ನಾಯಕ ಮತ್ತು ಕವಿ,ಲೇಖಕರೂ ಆಗಿದ್ದರು.
ಇಂದಿನ ಯುವವರ್ಗ ಅವರ ಕಾರ್ಯ ಹಾಗೂ ವಿಚಾರವನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪರಿಷತ್ ಸದಸ್ಯ ಗಿರೀಶ್ ಉಸ್ಕೈಕರ್, ಸೇರಿದಂತೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆಯಿಂದ ಯುವಕನ ಹತ್ಯೆ: ಆರೋಪಿ ಬಂಧನ