ಪಣಜಿ : ಕೋವಿಡ್ ಎರಡೂ ಲಸಿಕೆ ಪಡೆದುಕೊಂಡ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರವಿಲ್ಲದೆಯೇ ನೇರವಾಗಿ ಗೋವಾ ಪ್ರವೇಶಿಸಲು ಅನುಮತಿ ನೀಡುವಂತೆ ಕೋರಿ ಗೋವಾ ಸರ್ಕಾರ ಬಾಂಬೆ ಹೈ ಕೋರ್ಟ್ ನ ಗೋವಾ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು (ಗುರುವಾರ, ಜುಲೈ 8) ಕೈಗೆತ್ತಿಕೊಂಡ ನ್ಯಾಯಾಲಯವು ಈ ವಿಚಾರಣೆಯನ್ನು ಜುಲೈ 12 ಕ್ಕೆ ಮುಂದೂಡಿ ಆದೇಶಿಸಿದೆ.
ಇದನ್ನೂ ಓದಿ : ಸಹಕಾರ ಸಚಿವಾಲಯದ ರಚನೆ ರಾಜ್ಯ ಸರ್ಕಾರಗಳ ಫೆಡರಲ್ ಹಕ್ಕುಗಳ ಉಲ್ಲಂಘನೆ : ಸೀತಾರಾಮ್ ಯೆಚೂರಿ
ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಮುಂಬಯಿ ಉಚ್ಛ ನ್ಯಾಯಾಲಯವು ಮೇ 6 ರಂದು ಗೋವಾ ಪ್ರವೇಶಿಸಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಖಡ್ಡಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಎರಡೂ ಲಸಿಕೆ ಪಡೆದವರಿಗೆ ಯಾವುದೇ ನೆಗೆಟಿವ್ ಪ್ರಮಾಣಪತ್ರವಿಲ್ಲದೆಯೇ ಗೋವಾ ಪ್ರವೇಶಿಸಲು ಅವಕಾಶ ಕಲ್ಪಿಸುವಂತೆ ಗೋವಾ ಸರ್ಕಾರ ಮುಂಬಯಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಗುರುವಾರ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯವು ಜುಲೈ 12 ಕ್ಕೆ ಮುಂದೂಡಿದೆ.
ಇದನ್ನೂ ಓದಿ : ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ ನಟಿ ಸನ್ನಿ ಲಿಯೋನ್