ಪಣಜಿ: ಲುಯಿಜಿನ್ ಫಾಲೆರೊ ರವರು ಕಾಂಗ್ರೇಸ್ ಪಕ್ಷ ಬಿಟ್ಟಿರುವುದು ಅವರ ನಿವೃತ್ತಿಯ ಯೋಜನೆಯಾಗಿದೆ. ಕಾಂಗ್ರೆಸ್ ಪಕ್ಷ ಬಿಡಲು ಸ್ಪಷ್ಟ ಕಾರಣವನ್ನು ತಿಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಕಾಂಗ್ರೇಸ್ ಪಕ್ಷದ ಚುನಾವಣಾ ಸಮೀತಿಯ ಅಧ್ಯಕ್ಷ ಸ್ಥಾನ ನೀಡಲಾಗಿದ್ದರೂ ಕೂಡ ಇದನ್ನೆಲ್ಲಾ ತ್ಯಜಿಸಿ ಪಕ್ಷ ಬಿಡಲು ಸ್ಪಷ್ಟ ಕಾರಣವನ್ನು ಅವರು ರಾಜ್ಯದ ಜನತೆಗೆ ನೀಡಬೇಕು ಎಂದು ಗೋವಾ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಕಾಂಗ್ರೇಸ್ ಹಿರಿಯ ನಾಯಕ ಲುಯಿಜಿನ್ ಫಾಲೆರೊ ರವರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಪಣಜಿಯ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಗುಂಡೂರಾವ್ ಮಾತನಾಡುತ್ತಿದ್ದರು.
ಇದನ್ನೂ ಓದಿ:ರೇಷ್ಮೆ ಉತ್ಪಾದನೆ ದ್ವಿಗುಣಗೊಳಿಸಿ, ಮಾರುಕಟ್ಟೆ ವಿಸ್ತರಿಸಿ: ಸಚಿವ ಡಾ. ನಾರಾಯಣ ಗೌಡ
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಂಗ್ರೇಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಮಜಭೂತ್ ಆಗಿದೆ. ರಾಜ್ಯದ ಜನತೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ. ಎಷ್ಟು ಪಕ್ಷಗಳು ಗೋವಾಕ್ಕೆ ಬಂದರೂ ಕೂಡ ಕಾಂಗ್ರೇಸ್ ಪಕ್ಷದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಲುಯಿಜಿನ್ ಫಾಲೆರೊ ರವರನ್ನು ಕಾಂಗ್ರೇಸ್ ಪಕ್ಷವು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿದೆ. ಸದ್ಯ ಗೋವಾದಲ್ಲಿಯೂ ಅವರ ಅಗತ್ಯವಿತ್ತು, ಆದರೆ ಅವರು ಪಕ್ಷ ತ್ಯಜಿಸಿದ್ದಾರೆ. ಜನರ ವಿಶ್ವಾಸಘಾತ ಮಾಡಿದ್ದಾರೆ, ಜನತೆ ಅವರನ್ನು ಕ್ಷಮಿಸುವುದಿಲ್ಲ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್, ಕಾಂಗ್ರೇಸ್ ಪಕ್ಷದ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.