Advertisement
ಬೇಸಿಗೆ ಕಾಲದಲ್ಲಿ ಕೇರಳದಲ್ಲಿ ಪ್ರತೀ ವರ್ಷವೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಭಂಡಾರ ನಿರ್ಮಿಸಿ ಜಲ ಸಂಪನ್ಮೂಲವನ್ನು ರಕ್ಷಿಸಲಾಗುವುದು. ರಾಜ್ಯದಲ್ಲಿ ಸುರಿಯುವ ಮಳೆಯ ಪ್ರಮಾಣದಲ್ಲಿ ಕಡಿಮೆಯಾಗುವುದಿಲ್ಲ. ಆದರೆ ನೀರು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆಯಿಲ್ಲದಿರುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ತಜ್ಞರ ಸಮಿತಿಯ ವರದಿಯಲ್ಲಿ ಹೇಳುತ್ತಿದೆ. “ಭಂಡಾರ’ ಎನ್ನುವ ಯೋಜನೆಯನ್ನು ಸಾಕಾರಗೊಳಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಉಪಸ್ಥಿತಿಯಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Related Articles
Advertisement
ಏನಿದು “ಭಂಡಾರ’ ?ಕೇರಳದ ಹೊಳೆಗಳಲ್ಲಿ “ಭಂಡಾರ’ ನಿರ್ಮಿಸಿದಲ್ಲಿ ರೆಗ್ಯೂಲೇಟರ್‌ನ ವೆಚ್ಚ ಬಹಳಷ್ಟು ಕಡಿಮೆಯಾಗಲಿದೆ. ಅಲ್ಲದೆ ಸುಲಭದಲ್ಲಿ ಕಾರ್ಯಾಚರಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೊಳೆಗಳಲ್ಲಿ ವರ್ಷಪೂರ್ತಿ ನೀರು ಸಂಗ್ರಹಿಸಿಡಬಹುದು. ಗೋವಾದಲ್ಲಿ ಇಂತಹ 400ಕ್ಕೂ ಅಧಿಕ ಭಂಡಾರಗಳು ಬಳಕೆಯಲ್ಲಿವೆೆ. ನದಿಯಲ್ಲಿ ಎರಡು ಮೀಟರ್ ಅಂತರದಲ್ಲಿ ಕಾಂಕ್ರೀಟ್ ಕಂಬಗಳನ್ನು ನಿರ್ಮಿಸಿದ ಫೈಬರ್ ರೀಇನ್‌ಫೋರ್ಸಡ್ ಪ್ಲಾಸ್ಟಿಕ್ (ಎಫ್.ಆರ್.ಪಿ) ನಿಂದ ಶಟರ್ ಸ್ಥಾಪಿಸಲಾಗುತ್ತದೆ. ನದಿಯ ಹರಿವಿಗನುಗುಣವಾಗಿ ನಾಲ್ಕೋ ಐದೋ ಕಿಲೋ ಮೀಟರ್ ದೂರದಲ್ಲಿ ನೀರನ್ನು ತಡೆದು ನಿಲ್ಲಿಸುವ ತಡೆಗೋಡೆಗಳನ್ನು ನಿರ್ಮಿಸಬೇಕು. ಮಳೆಗಾಲ ಕಳೆಯುತ್ತಿದ್ದಂತೆ ಎಲ್ಲ ಶಟರ್‌ಗಳನ್ನು ಮುಚ್ಚಿ ನೀರನ್ನು ಸಂಗ್ರಹಿಸಬೇಕು. ನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆ ಅನುಸಾರವಾಗಿ ಶಟರ್‌ಗಳನ್ನು ತೆರೆದು ಒಂದರಿಂದ ಇನ್ನೊಂದು ಭಂಡಾರಕ್ಕೆ ನೀರನ್ನು ಹರಿಯಬಿಡಬೇಕು. ಹರಿಯಬಿಟ್ಟು ನೀರು ತುಂಬಿಕೊಂಡಾಗ ಶಟರ್ ಮುಚ್ಚಬೇಕು. ಮಳೆಗಾಲದಲ್ಲಿ ಎಲ್ಲ ಶಟರ್‌ಗಳನ್ನು ತೆರೆಯಬೇಕು. ಈ ಕಾರಣದಿಂದ ಮಳೆಗಾಲದಲ್ಲಿ ಹೊಳೆಯಲ್ಲಿ ಸ್ವಾಭಾವಿಕವಾಗಿ ನೀರಿನ ಹರಿವು ಇರುತ್ತದೆ. ಇದರಿಂದಾಗಿ ಪರಿಸರ ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ಮೀನಿನ ಸಂಪತ್ತು ಸಂರಕ್ಷಿಸಬಹುದು. ಕೇರಳದಲ್ಲಿ ಬರಗಾಲಕ್ಕೆ ಮುಖ್ಯ ಕಾರಣ ಮಳೆಯ ಕೊರತೆಯಲ್ಲ ಎಂದು ಅಧ್ಯಯನ ಸಮಿತಿ ವರದಿ ನೀಡಿದೆ. 1871ರಿಂದ 2008 ರ ವರೆಗೆ ಮಳೆಯ ಲಭ್ಯತೆಯನ್ನು ಪರಿಗಣಿಸಿ ಈ ಸಮಿತಿ ಬರಗಾಲಕ್ಕೆ ಕಾರಣವನ್ನು ಕಂಡುಕೊಂಡಿದೆ. ಮುಂಗಾರು ಮಳೆ ಕಡಿಮೆಯಾಗುತ್ತಿದ್ದರೂ ಬೇಸಗೆಯಲ್ಲಿ ಮತ್ತು ಶೀತಕಾಲದಲ್ಲಿ ಮಳೆಯ ಪ್ರಮಾಣ ಅಧಿಕವಾಗಿ ಲಭಿಸುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ಬೊಟ್ಟು ಮಾಡಿದೆ. ಸುರಿದ ಮಳೆ ನೀರು ತತ್‌ಕ್ಷಣ ಸಮುದ್ರ ಸೇರುವುದರಿಂದ ಕೇರಳದಲ್ಲಿ ಬರದ ಅನುಭವವಾಗಲು ಕಾರಣವಾಗಿದೆ. ಚಿತ್ರ : ಚಂದ್ರಗಿರಿ ಹೊಳೆ