Advertisement

ಗೋವಾ: ಕೈ ಶಾಸಕರ ಬಂಡಾಯ ಶಮನವಾಗುತ್ತಿಲ್ಲ,ಸಚಿವರಿಂದ ಉತ್ತರ ಸಿಗುತ್ತಿಲ್ಲ

04:49 PM Jul 14, 2022 | Team Udayavani |

ಪಣಜಿ: ಪ್ರಸ್ತುತ ಗೋವಾ ವಿಧಾನಸಭೆಯ ಮುಂಗಾರು ಅಧಿವೇಶನ ನಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ಶಾಸಕರ ಬಂಡಾಯ ಶಮನವಾಗುತ್ತಿಲ್ಲ, ಸಚಿವರಿಂದ ಉತ್ತರ ಸಿಗುತ್ತಿಲ್ಲ ಎಂದು ವಿಪಕ್ಷ ಶಾಸಕರೆಲ್ಲ ಆರೋಪಿಸಿದ್ದಾರೆ.

Advertisement

ಗುರುವಾರ ಅಧಿವೇಶನ ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಿದ್ದನ್ನು ವಿರೋಧಿಸಿ ಎಲ್ಲಾ ಪ್ರತಿಪಕ್ಷದ ಶಾಸಕರು ವಿಧಾನಸಭಾಧ್ಯಕ್ಷರ ಮುಂದೆ ಬಾವಿಗಿಳಿದು ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಇಂದು ವಿಧಾನಸಭೆಯಲ್ಲಿ ಭಾರೀ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಯೂರಿ ಅಲೆಮಾವ್, ಸಂಕಲ್ಪ್ ಅಮೋಣಕರ್ ಮತ್ತು ವಿಜಯ್ ಸರ್ದೇಸಾಯಿ ಇಂದು ವಿಧಾನಸಭೆಯಲ್ಲಿ ಆಕ್ರಮಣಕಾರಿಯಾಗಿ ಕಾಣಿಸಿಕೊಂಡರು.

ಈ ನಡುವೆ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ಗೋವಾ ಪ್ರವಾಸದಲ್ಲಿದ್ದಾರೆ. ಅವರ ಯೋಜಿತ ಭೇಟಿಯಿಂದಾಗಿ 1 ಗಂಟೆ ಮುಂಚಿತವಾಗಿಯೇ ಅಧಿವೇಶನದ ಕಲಾಪವನ್ನು  ವಿಧಾನಸಭಾಧ್ಯಕ್ಷರು ಸ್ಥಗಿತಗೊಳಿಸಿದರು. ಈ ಬಗ್ಗೆಯೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.  ಅವಧಿಗೂ ಮುನ್ನವೇ ಅಧಿವೇಶನವನ್ನು ಮುಂದೂಡುವುದು ಪ್ರಜಾಪ್ರಭುತ್ವಕ್ಕೆ ಮತ್ತು ಗೋಮಾಂತಕರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಶಾಸಕ ಸಂಕಲ್ಪ್ ಅಮೋಣಕರ್ ಹೇಳಿದ್ದಾರೆ. ಹಾಗಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ತಮ್ಮ ವಿರೋಧವನ್ನು ತೀವ್ರಗೊಳಿಸಿರುವ ಚಿತ್ರಣ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next