Advertisement

Minor girl ರೇಪ್ ; ಗೋವಾದಲ್ಲಿ ವಿಡಿಯೋ ವೈರಲ್ ಮಾಡಿದ ಆರೋಪಿ ಬಂಧನ

05:34 PM Jun 17, 2023 | Team Udayavani |

ಪಣಜಿ: ಗೋವಾದ ಸತ್ತರಿ ತಾಲೂಕಿನ ವಾಳಪೈ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದ ಆರೋಪಿಯನ್ನು ಕರ್ನಾಟಕದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಷ್ಣು ಲಕ್ಷ್ಮಣ ಚೌಹಾಣ್ ಎಂಬಾತನಾಗಿದ್ದು, ಅಶ್ಲೀಲ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಎನ್ನಲಾಗಿದೆ.

Advertisement

ಆರೋಪಿ  ಮೂಲತಃ ಗದಗದವನಾಗಿದ್ದು,ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ. ಗೋವಾ ಸಬ್ ಇನ್ಸ್ಪೆಕ್ಟರ್ ಸರ್ವೇಶ್ ಗಡ್ಡಿ, ಪೊಲೀಸ್ ಪೇದೆ ಹರುಣ್ ಶೇಖ್ ಮತ್ತು ಸುಶಾಂತ್ ಗಾಂವ್ಕರ್ ಅವರ ತಂಡ ಆತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಚೋಲಿ ಎಸ್‍ಡಿಪಿಒ ಸಾಗರ್ ಎಕೋಸ್ಕರ್ ಅವರ ಮೇಲ್ವಿಚಾರಣೆಯಲ್ಲಿ ವಾಲ್ಪೈ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ದಿನೇಶ್ ಗಡೇಕರ್ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ವಾಳಪೈ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಜತೆಗೆ ಪೋಕ್ಸೋ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next