Advertisement

ಗೋವಾ ಕನ್ನಡ ಸಂಘ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

04:31 PM Jul 16, 2023 | Team Udayavani |

ಪಣಜಿ: ಹೆಚ್ಚು ಹೆಚ್ಚು ವಿದ್ಯಾವಂತನಾಗುತ್ತ ಮನುಷ್ಯ ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿದ್ದಾನೆ. ಇಂದಿನ ಯುವಜನಾಂಗಕ್ಕೆ ಜೀವನದ ಪ್ರಾಥಮಿಕ ತಿಳುವಳಿಕೆಯೂ ಇಲ್ಲದ ಶಿಕ್ಷಣ ದೊರೆಯುತ್ತಿದೆ. ನಾವೂ ಬದುಕಿ ಇತರರನ್ನೂ ಬದುಕಿಸುವಂತಹ ಮನಸ್ಥಿತಿ ಎಲ್ಲರದಾಗಬೇಕು ಎಂದು ನಿವೃತ್ತ ಉಪನ್ಯಾಸಕರಾದ ಮಲ್ಲಿಕಾರ್ಜುನ ಹೂಗಾರ ನುಡಿದರು.

Advertisement

ಗೋವಾದ ಮಡಗಾಂವ ವೀರಶೈವ ಲಿಂಗಾಯತ ಸಭಾಗೃಹದಲ್ಲಿ ಶನಿವಾರ ಸಂಜೆ ಗೋವಾ ಕನ್ನಡ ಸಂಘ (ರಿ) ಮಡಗಾಂವ ಆಯೋಜಿಸಿದ್ದ 2022-23 ನೇಯ ಸಾಲಿನ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

ಕೇವಲ ಅಂಕ ಗಳಿಕೆಗಾಗಿ ಅಲ್ಲದೆಯೇ ಜ್ಞಾನ ಗಳಿಕೆಗಾಗಿ ಓದಬೇಕು, ಈ ಮೂಲಕ ವಿದ್ಯಾರ್ಥಿಗಳು ವಿದ್ಯಾವಂತರಾಗಿಯೂ ಜ್ಞಾನವಂತರಾಗಿಯೂ ಸಾಧನೆಗೈಯ್ಯುವಂತಾಗಬೇಕು ಎಂದು ಮಲ್ಲಿಕಾರ್ಜುನ ಹೂಗಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯ ಮೇಲೆ ಗೋವಾ ಕನ್ನಡ ಸಂಗ ಮಡಗಾಂವ ಅಧ್ಯಕ್ಷ ಕೆ.ಮಲ್ಲಿಕಾರ್ಜುನಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಪೂರ್ವಿ ಹೆಗಡೆ ರವರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿಜಯಾ ಹೆಗಡೆ  ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಮೋಹನ್ ಕಾಂಬ್ಳಿ ಕೊನೆಯಲ್ಲಿ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ನಂತರ ನಡೆ ಸಂಗೀತ ಕಾರ್ಯಕ್ರಮದಲ್ಲಿ ಚನ್ನು ಪಡಗದ ಮತ್ತು ಸ್ಮೀತಾ ಬಗಲಿ ತಂಡ ಹಾಡಿದ ಕನ್ನಡ ಚಲನಚಿತ್ರ ಗೀತೆಗಳ ಹಾಡು ಪ್ರೇಕ್ಷಕರ ಗಮನ ಸೆಳೆಯಿತು. ಪ್ರಸಕ್ತ ವರ್ಷ ಹತ್ತನೇಯ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next