Advertisement

Goa: ಕದಂಬ ಕಾರ್ಪೊರೇಷನ್ ಪ್ರಯಾಣಿಕರಿಗಾಗಿ ‘ಲೈವ್ ಬಸ್ ಟ್ರ್ಯಾಕ್ ಆ್ಯಪ್’ ಬಿಡುಗಡೆ

06:36 PM Jul 15, 2023 | Team Udayavani |

ಪಣಜಿ: ಗೋವಾ ರಾಜ್ಯ ಕದಂಬ ಸಾರಿಗೆ ಸಂಸ್ಥೆ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣವು ಇನ್ನಷ್ಟು ಆಹ್ಲಾದಕರವಾಗಲಿದೆ. ಕದಂಬ ಕಾರ್ಪೊರೇಷನ್ ‘ಲೈವ್ ಬಸ್ ಟ್ರ್ಯಾಕ್ ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದು, ಇದನ್ನು ಶನಿವಾರದಿಂದ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಆ್ಯಪ್ ಮುಂದಿನ 15 ದಿನಗಳ ಕಾಲ ಲಭ್ಯವಿದ್ದು, ಆಗಸ್ಟ್‌ನಿಂದ ಅಧೀಕೃತವಾಗಿ ಜಾರಿಗೆ ಬರಲಿದೆ ಎನ್ನಲಾಗಿದೆ.

Advertisement

ಕೆಲವು ತಿಂಗಳ ಹಿಂದೆ ಕದಂಬ ಕಾರ್ಪೊರೇಷನ್ ‘ಲೈವ್ ಬಸ್ ಟ್ರ್ಯಾಕ್ಆ್ಯಪ್’ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಕದಂಬ ಬಸ್‍ಗಳ ಓಡಾಟದ ಸ್ಥಳವನ್ನು ಕಂಡುಹಿಡಿಯಲು ಪ್ರಯಾಣಿಕರಿಗೆ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ‘ಕದಂಬ ಪ್ರಯಾಣಕ್ಕೆ ಸಂಬಂಧಿಸಿದ ನಾಗರಿಕರ ಹಲವು ಸಮಸ್ಯೆಗಳನ್ನು ಈ ಆ್ಯಪ್ ಪರಿಹರಿಸಲಿದೆ’ ಎಂದು ಕದಂಬ ನಿಗಮ ವಿಶ್ವಾಸ ವ್ಯಕ್ತಪಡಿಸಿದೆ.

ಆ್ಯಪ್ ಅನ್ನು ಬೆಂಗಳೂರು ಮೂಲದ ರೋಮನ್ ಟೆಕ್ನಾಲಜಿ ಕಂಪನಿಯು ಉಚಿತವಾಗಿ ಅಭಿವೃದ್ಧಿಪಡಿಸಿದೆ. ಜುಲೈ 15 ರಿಂದ ಪ್ರಾಯೋಗಿಕವಾಗಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗುವುದು ಮತ್ತು ಮುಂದಿನ 15 ದಿನಗಳವರೆಗೆ ಮೇಲ್ವಿಚಾರಣೆ ಮತ್ತು ದೋಷಗಳನ್ನು ಸರಿಪಡಿಸಿದ ನಂತರ ಆಗಸ್ಟ್ 1 ರಿಂದ ಎಲ್ಲಾ ಪ್ರಯಾಣಿಕರಿಗೆ ಮಾಹಿತಿಗೆ ಲಭ್ಯವಿರಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next