Advertisement
ಭಾರತೀಯ ಅಂತಾರಾಷ್ಟ್ರೀಯಯ ಚಲನಚಿತ್ರೋತ್ಸವದ ಸಂದರ್ಭದಲ್ಲೇ ಎನ್.ಎಫ್.ಡಿ.ಸಿ.ಯ 13 ನೇ ವರ್ಷದ ಫಿಲ್ಮ್ ಬಜಾರ್ ನಲ್ಲಿ ಉದಯವಾಣಿಯೊಂದಿಗೆ ಮಾತನಾಡುತ್ತಾ, ಸಮಕಾಲೀನ ಸಂಗತಿಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದು ಪೃಥ್ವೀ ಅಭಿಪ್ರಾಯಪಟ್ಟರು.
Related Articles
Advertisement
ನಗರೀಕರಣ ವ್ಯಾಪಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ನಿಮ್ಮ ಪ್ರೇಕ್ಷಕರು ಯಾರು? ಯಾವುದಾದರೂ ನಿರ್ದಿಷ್ಟ ಪ್ರೇಕ್ಷಕ ಸಮುದಾಯಕ್ಕೆಂದು ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ, ಹಾಗೆ ಹೇಳಲಾಗದು. ನಾನು ಸಿನಿಮಾ ಮಾಡುವುದು ಎಲ್ಲರೂ ನೋಡಲೆಂದು. ಒಬ್ಬ ನಿರ್ದೇಶಕನಾಗಿ ನನ್ನ ಅಸೆಯೂ ಇದೇ. ನನ್ನ ಸಿನಿಮಾ ಎಲ್ಲರೂ ನೋಡಿ ಆಭಿಪ್ರಾಸಬೇಕೆಂಬುದು. ಒಂದು ಸಮಸ್ಯೆ ಆಥವಾ ಸಂಗತಿ ಒಂದು ನಿರ್ದಿಷ್ಟ ಗುಂಪಿಗೆ ಸೇರಿರಬಹುದಷ್ಟೇ, ಆ ಗುಂಪಿನೊಂದಿಗೆ ಸಂಪರ್ಕ ಕಲ್ಪಿಸಬಹುದಷ್ಟೇ. ಇದರರ್ಥ ಆವರಿಗೆಂದೇ ಅಲ್ಲ.
ನಗರದ ಪ್ರೇಕ್ಷಕರು ಹಾಗೂ ಟೆಕ್ಕಿಗಳು ಹೆಚ್ಚಾಗಿ ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳನ್ನು ನೋಡುತ್ತಿದ್ದಾರೆ. ಆದಕ್ಕೆ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂಬ ಅಭಿಪ್ರಾಯವಿದೆಯಲ್ಲ ಎಂಬ ಪ್ರಶ್ನೆಗೆ, ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರಬೇಕು ಎಂಬ ಮಾತು ನಿಜ. ಹಾಗಾಗಿ ಬೇರೆ ಭಾಷೆಗಳ ಸಿನಿಮಾಗಳತ್ತ ವಲಸೆ ಹೋಗಿರಬಹುದು. ಅದರೆ ನಮ್ಮಲ್ಲಿ ಒಳ್ಳೆಯ ಸಿನಿಮಾ ಮಾಡಿದರೆ ಪ್ರೇಕ್ಷಕರು ವಾಪಸು ಬರುತ್ತಾರೆಂಬ ನಂಬಿಕೆ ನನಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನೆಟ್‌ಫ್ಲಿಕ್ಸ್ ನಂಥ ಡಿಜಿಟಲ್ ಮಾರ್ಗಗಳು ಆವರ ಆಯ್ಕೆಯನ್ನು ಹೆಚ್ಚುಗೊಳಿಸಿವೆ. ಹಾಗಾಗಿ ಒಳ್ಳೆಯ ಸಿನಿಮಾಗಳನ್ನು ರೂಪಿಸಿ ಅದನ್ನು ಅಸಕ್ತರಿಗೆ ತಲುಪಿಸುವಂಥ ಕೆಲಸದಂಥ ನಾವು ಹೆಚ್ಚು ಗಮನ ನೀಡಬೇಕಿದೆ ಎಂದದ್ದು ಪೃಥ್ವಿ ಕೊಣನೂರು.
ಪೃಥ್ವಿಯವರ ಈ ಹಿಂದಿನ ಮಕ್ಕಳ ಚಲನಚಿತ್ರ ‘ರೈಲ್ವೇ ಚಿಲ್ಡ್ರನ್’ ನ ಪ್ರಮುಖ ಪಾತ್ರ ನಿರ್ವಹಿಸಿದ್ದ ಮನೋಹರ್ ಕೆ ಅವರಿಗೆ ರಾಷ್ಟ್ರೀಯ ಅತ್ಯುತ್ತಮ ಮಕ್ಕಳ ನಟ ಪ್ರಶಸ್ತಿ ಲಭಿಸಿತ್ತು. ಹಾಗೆಯೇ ರಾಜ್ಯ ಮಟ್ಟದಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿತ್ತು. ಮುಂಬಯಿ ಅಂತಾರಾಷ್ಟ್ರೀಯಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ವಿಮರ್ಶಕರ ಪ್ರಶಂಸೆ ಪಡೆದಿತ್ತು. ಅದಲ್ಲದೇ, ಇಫಿ ಉತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು. ಚಿಕಾಗೋ, ಮೆಲ್ಬೋರ್ನ್ ಮತ್ತಿತರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿತ್ತು.