Advertisement

ಪಿಂಕಿ ಎಲ್ಲಿ? ಕಥಾ ಎಳೆಯೇ ಅದರ ಜೀವಾಳ

07:05 PM Jan 18, 2021 | Team Udayavani |

ಪಣಜಿ : ಈ ಚಿತ್ರದ ಎಳೆ ನನ್ನನ್ನು ತೀವ್ರವಾಗಿ ಕಾಡಿದೆ. ಹಾಗಾಗಿ ಅದನ್ನು ಹೇಳಲು ಪ್ರಯತ್ನಿಸಿದ್ದೇನೆ ಎಂದವರು ಚಿತ್ರನಿರ್ದೇಶಕ ಪೃಥ್ವಿ ಕೊಣನೂರು.

Advertisement

ಗೋವಾದ ಇಫಿ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಡಿ ಸೋಮವಾರ ಪ್ರದರ್ಶನಗೊಂಡ ಕನ್ನಡದ ಪಿಂಕಿ ಎಲ್ಲಿ ? ತಂಡಕ್ಕೆ ಕೆಂಪು ಹಾಸಿನ ಸ್ವಾಗತ (ರೆಡ್ ಕಾರ್ಪೆಟ್) ದ ಸಂದರ್ಭ ಚಿತ್ರ ರಸಿಕರೊಂದಿಗೆ ಪೃಥ್ವಿ ಕೊಣನೂರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಒಂದು ಸುದ್ದಿಬಂದಿತ್ತು. ಅದು ಸತ್ಯಕತೆ, ಅದು ನನ್ನನ್ನು ಬಹುವಾಗಿ ಕಾಡಿತು, ಆ ಕುರಿತು ಸಾಕಷ್ದು ಅಧ್ಯಯನ ಮಾಡಿದೆ. ಅಂತಿಮವಾಗಿ ಸಿನಿಮಾರೂಪಕ್ಕೆ ಇಳಿದಾಗ ಖುಷಿಯಾಯಿತು. ಅದೀಗ ನಿಮ್ಮ ಮುಂದಿದೆ ಎಂದವರು ಪೃಥ್ವಿ.

ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆ ಮಾಡಿದ್ದಕ್ಜೆ ಖುಷಿಯಾಗಿದೆ. ಇದೊಂದು ಒಳ್ಳೆಯ ಅವಕಾಶ. ಕೊರೊನಾ ಸಂದರ್ಭದಲ್ಲೂ ಚಿತ್ರೋತ್ಸವ ಸಂಘಟಿಸಿರುವುದೂ ಸಹ ಸಂತೋಷ ತಂದಿದೆ ಎಂದರು.

Advertisement

ಇದನ್ನೂ ಓದಿ:ಇಫಿ 2021 ಸ್ಪೆಷಲ್: ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ‌ ತಟ್ಟಬೇಕೋ, ಬೇಡವೋ?

ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ ಗುಂಜಾಲಮ್ಮ, ಚಿತ್ರದ ನಿರ್ಮಾಪಕ‌ ಕೃಷ್ಞೇಗೌಡ ಮತ್ತಿತರರು ಈ ಸಂದರ್ಭದಲ್ಲಿ ‌ಉಪಸ್ಥಿತರಿದ್ದರು.

ಚಲನಚಿತ್ರ ಪ್ರದರ್ಶನಕ್ಕೆ ಮುನ್ನ ಚಿತ್ರ ತಂಡವನ್ನು ಇಫಿ ಪರವಾಗಿ ಅಭಿನಂದಿಸಲಾಯಿತು.
ಪಿಂಕಿ ಎಲ್ಲಿ ಕನ್ನಡದ ವಿಭಾಗದಲ್ಲಿ ಚಿತ್ರೋತ್ಸವಕ್ಕೆ ಆಯ್ಕೆಯಾದ ಏಕೈಕ ಕನ್ನಡ ಚಿತ್ರವಾಗಿದೆ.
ಪೃಥ್ವಿ ಮೂಲತ: ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಈಗ ಚಿತ್ರ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಅವರ ರೈಲ್ವೇ ಚಿಲ್ಡ್ರನ್ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿತ್ತು. ಅದರಲ್ಲಿ ಅಭಿನಯಿಸಿದ ಮನೋಹರನಿಗೆ ಅತ್ಯುತ್ತಮ ಬಾಲನಟ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next