Advertisement

ಗೋವಾ ಶಾಲೆಗಳಲ್ಲಿ ಪ್ರಧಾನಿ ,ರಾಷ್ಟ್ರಪತಿ ಫೋಟೊ ಕಡ್ಡಾಯ

07:30 AM Oct 08, 2017 | Team Udayavani |

ಪಣಜಿ: ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಹಾಕಬೇಕು. 

Advertisement

ಗೋವಾ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಶಾಲೆಗಳಿಗೆ ಇಂತಹುದೊಂದು ಸುತ್ತೋಲೆಯನ್ನು ರವಾನಿಸಿದೆ. ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರ ಆದೇಶದಂತೆ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ದೀಪಾವಳಿ ರಜೆ ಕಳೆದು ಶಾಲೆ ಪುನಾರಂಭವಾಗುತ್ತಿದ್ದಂತೆ ಶಾಲೆಗಳ ಆವರಣದಲ್ಲಿ ಕಡ್ಡಾಯವಾಗಿ ಮೋದಿ ಮತ್ತು ಕೋವಿಂದ್‌ರ ಫೋಟೊಗಳನ್ನು ಹಾಕಬೇಕು ಎಂದು ಇತ್ತೀಚೆಗೆ ಪರ್ರಿಕರ್‌ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಆದೇಶಿಸಿದ್ದರು. ಗೋವಾದ ಶಾಲೆಗಳಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್‌, ಕೋವಿಂದ್‌ ಮತ್ತು ಪ್ರಧಾನಿ ಮೋದಿ ಫೋಟೊ ಹಾಕುವುದು ಕಡ್ಡಾಯ. ಇಂದಿನ ಮಕ್ಕಳಿಗೆ ಪ್ರಧಾನಿ, ರಾಷ್ಟ್ರಪತಿ ಯಾರು ಎಂದೇ ತಿಳಿದಿರುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next