ಪಣಜಿ: 61 ದಿನಗಳ ಮೀನುಗಾರಿಕೆ ನಿರ್ಬಂಧದ ಬಳಿಕ ಅಗಷ್ಟ್ 1 ರಿಂದ ಗೋವಾದಲ್ಲಿ ಮೀನುಗಾರಿಕೆ ನಿರ್ಬಂಧ ತೆರವುಗೊಂಡ ನಂತರವೂ ಹೊರ ರಾಜ್ಯಗಳ ಕಾರ್ಮಿಕರು ಇನ್ನೂ ಗೋವಾಕ್ಕೆ ಆಗಮಿಸದ ಕಾರಣ ಮೊದಲ ದಿನ ಕೇವಲ 40 ಟ್ರಾಲರ್ ಗಳು ಮಾತ್ರ ಮೀನುಗಾರಿಕೆಗೆ ತೆರಳಿವೆ. ಹಲವು ಟ್ರಾಲರ್‌ಗಳು ನೀರಿಗೆ ಇಳಿಯಲು ಸಾಧ್ಯವಾಗಿಲ್ಲ. ಆದ್ದರಿಂದ, ಮೀನುಗಾರಿಕೆ ಆರಂಭದ ಮೊದಲ ದಿನವೇ ಮೀನುಗಾರಿಕೆಗೆ ತೆರಳುವ ಬೋಟ್‍ಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಂತಾಗಿದೆ.
ಬೋಟ್ ಸಿಬ್ಬಂದಿ ಹಾಗೂ ಇತರೆ ಹೊರ ರಾಜ್ಯಗಳ ಕಾರ್ಮಿಕರು ಇನ್ನೂ ಗೋವಾಕ್ಕೆ ಬಂದಿಲ್ಲ. ಇದರಿಂದಾಗಿ ಶೇ 80ರಷ್ಟು ಟ್ರಾಲರ್‌ಗಳನ್ನು ಜೆಟ್ಟಿಯಲ್ಲಿ ಇರಿಸಲಾಗಿದೆ. ಈ ಕೆಲಸಗಾರರು ನಿಧಾನವಾಗಿ ಬರುತ್ತಾರೆ. ಅವರು ಬಂದ ನಂತರವೇ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭವಾಗಲಿದೆ ಎಂದು ಕುತ್ಬನ್ ಮಚ್ಚಿಮಾರ್ ಸೊಸೈಟಿ ಅಧ್ಯಕ್ಷ ವಿನಯ್ ತಾರಿ ತಿಳಿಸಿದ್ದಾರೆ. ಕುತ್ಬನ್ ಜೆಟ್ಟಿಯಲ್ಲಿ ಸುಮಾರು 300 ಸಣ್ಣ ಮತ್ತು ದೊಡ್ಡ ಟ್ರಾಲರ್‌ಳಿವೆ. ಈ ಟ್ರಾಲರ್‍ಗಳು ಮುಖ್ಯವಾಗಿ ಒಡಿಶಾ, ಪಶ್ಚಿಮ ಬಂಗಾಳ, ಕರ್ನಾಟಕ ಮೂಲದವರಾಗಿದ್ದಾರೆ. ಬಂಗಾಳ, ಜಾಖರ್ಂಡ್ ಮತ್ತು ಬಿಹಾರದಿಂದ ಕಾರ್ಮಿಕರನ್ನು ಕರೆತರಲಾಗುತ್ತದೆ ಎನ್ನಲಾಗಿದೆ.
ಮೀನುಗಾರ ಸವಿಯೋ ಡಿ ಸಿಲ್ವಾ ಮಾತನಾಡಿ, ಇಷ್ಟು ಬೇಗ ಮೀನುಗಾರಿಕೆ ಸೀಸನ್ ಆರಂಭವಾಗುತ್ತದೆ ಎಂದು ನಿರೀಕ್ಷಿಸದ ಕಾರಣ ಹೊರ ರಾಜ್ಯದ ಬಹುತೇಕ ಕಾರ್ಮಿಕರು ಇನ್ನೂ ಗೋವಾಕ್ಕೆ ಬಂದಿಲ್ಲ. ಎಲ್ಲಾ ಕಾರ್ಮಿಕರು ಆಗಸ್ಟ್ 15 ರೊಳಗೆ ಆಗಮಿಸುವ ನಿರೀಕ್ಷೆಯಿದೆ ನಂತರ ಮೀನುಗಾರಿಕೆ ಪೂರ್ಣ ಸ್ವಿಂಗ್ ಆಗಿ ಪುನರಾರಂಭಗೊಳ್ಳುತ್ತದೆ ಎಂದು ಅವರು ಹೇಳಿದರು.
ಸರ್ಕಾರವು ಕಟ್ಟುನಿಟ್ಟಿನ ಷರತ್ತುಗಳನ್ನು ಸಡಿಲಿಸಬೇಕಿದೆ…
ಈ ನಡುವೆ ಹವಾಮಾನ ಇಲಾಖೆ ಮೂರು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದ್ದು, ಆಳ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಮನವಿ ಮಾಡಿದೆ. ಇದರಿಂದ ರಾಜ್ಯದ ಮೀನುಗಾರರು ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆಗೆ ಆಳಸಮುದ್ರಕ್ಕೆ ತೆರಳಿಲ್ಲ ಎಂದು ಹೇಳಲಾಗುತ್ತಿದೆ. ಮೇಲಾಗಿ ಮೀನುಗಾರಿಕಾ ಬೋಟ್‍ಗಳಲ್ಲಿರುವ ಕಾರ್ಮಿಕರು ತಮ್ಮ ರಾಜ್ಯಗಳಿಂದ ಗೋವಾಕ್ಕೆ ಹಿಂತಿರುಗಿಲ್ಲ.
ಕಾರ್ಮಿಕರ ಕೊರತೆಯಿಂದ ಬಹುತೇಕ ಟ್ರಾಲರ್‍ಗಳು ಇನ್ನೂ ಸಮುದ್ರಕ್ಕೆ ಇಳಿದಿಲ್ಲ. ಹೀಗಾಗಿ ಇನ್ನೂ ಕೆಲವು ದಿನ ಕಾಯಬೇಕು. ಒಂದೆಡೆ ಕಾರ್ಮಿಕರನ್ನು ಹುಡುಕುವುದೇ ಕಷ್ಟವಾಗುತ್ತಿದ್ದರೆ ಮತ್ತೊಂದೆಡೆ ಮೀನುಗಾರಿಕೆ ಇಲಾಖೆ ವಿಧಿಸಿರುವ ಕಟ್ಟುನಿಟ್ಟಿನ ಷರತ್ತುಗಳು ನಮ್ಮ ಸಂಕಷ್ಟವನ್ನು ಹೆಚ್ಚಿಸಿವೆ. ಸರಕಾರ ಈ ಷರತ್ತುಗಳನ್ನು ಸಡಿಲಿಸಬೇಕಿದೆ ಎಂದು ಕುತ್ಬನ್ ಮೀನುಗಾರಿಕಾ ಸೊಸೈಟಿ ಅಧ್ಯಕ್ಷ ವಿನಯ್ ತಾರಿ ಆಘ್ರಹಿಸಿದರು.
ಇದನ್ನೂ ಓದಿ: ಹೊನ್ನಿಕೇರಿ ಅರಣ್ಯದಲ್ಲಿ ಚಿರತೆ ಪತ್ತೆ; ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿತ್ರಗಳು ಸೆರೆ