Advertisement

ಗೋವಾ: ಬೆಲೆ ಏರಿಕೆ ನಡುವೆ ಜನರಿಗೆ ವಿದ್ಯುತ್‌ ಶಾಕ್‌

01:13 PM May 02, 2022 | Team Udayavani |

ಪಣಜಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಗೋವಾ ಸರ್ಕಾರ ಜನತೆಗೆ ವಿದ್ಯುತ್ ಶಾಕ್ ನೀಡಿದೆ. ವಿದ್ಯುತ್ ಪ್ರತಿ ಯೂನಿಟ್‍ಗೆ 10 ರಿಂದ್ 15 ಪೈಸೆ ವರೆಗೆ ಹೆಚ್ಚಳ ಮಾಡಲಾಗಿದ್ದು, ಈ ಕುರಿತು ವಿದ್ಯುತ್ ಇಲಾಖೆ ಅಧಿಸೂಚನೆ ಹೊರಡಿಸಿದೆ.

Advertisement

ಶೂನ್ಯದಿಂದ 100 ಯೂನಿಟ್ ವಿದ್ಯುತ್ ಗೆ 1.50 ಪೈಸೆ ಇದ್ದ ದರವನ್ನು ಇದೀಗ 1.60 ಪೈಸೆಗೆ ಹೆಚ್ಚಳ ಮಾಡಲಾಗಿದೆ. 101 ರಿಂದ 200 ಯೂನಿಟ್ ವರೆಗೆ 2.25 ಪೈಸೆಯಿಂದ 2.35 ಪೈಸೆಗೆ ಹೆಚ್ಚಳ ಮಾಡಲಾಗಿದೆ. 201 ರಿಂದ 300 ಯೂನಿಟ್‍ಗೆ 2.85 ದಿಂದ 2.95 ರೂಗೆ ಹೆಚ್ಚಳ ಮಾಡಲಾಗಿದೆ. 301 ರಿಂದ 400 ಯೂನಿಟ್‍ವರೆಗೆ 3.65 ರೂಗಳಿಂದ 3.90 ರೂಗೆ ಹೆಚ್ಚಳ ಮಾಡಲಾಗಿದೆ. ಹೀಗೆ ರಾಜ್ಯದಲ್ಲಿ ವಿದ್ಯುತ್ ದರವನ್ನು ಹಂತ ಹಂತವಾಗಿ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ:ಹೈದರಾಬಾದ್: ರಾಹುಲ್ ಗಾಂಧಿ ಕ್ಯಾಂಪಸ್ ಭೇಟಿಗೆ ಅನುಮತಿ ನಿರಾಕರಿಸಿದ ಉಸ್ಮಾನಿಯಾ ವಿವಿ

ಹೋಟೆಲ್‍ಗಳಲ್ಲಿ 4.95 ರೂ ಇದ್ದ ವಿದ್ಯುತ್ ದರವನ್ನು ಇದೀಗ 5.25 ರೂಗೆ ಹೆಚ್ಚಳ ಮಾಡಲಾಗಿದ್ದು, ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಿಂದಾಗಿ ರಾಜ್ಯದ ಜನತೆಗೆ ಇನ್ನಷ್ಟು ಹೊರೆ ಬೀಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next