Advertisement

Goa: ಗೋವಾ ಎಕ್ಸ್ ಪ್ರೆಸ್‌ನ ಎಂಟು ಪ್ರಯಾಣಿಕರು ಹಠಾತ್ ಅಸ್ವಸ್ಥ

05:28 PM Sep 12, 2023 | Team Udayavani |

ಪಣಜಿ:  ಸೋಮವಾರ ರಾತ್ರಿ ಗೋವಾ ಎಕ್ಸ್ ಪ್ರೆಸ್ ನ ಎಂಟು ಪ್ರಯಾಣಿಕರು ಹಠಾತ್ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಫುಡ್ ಪಾಯ್ಸನ್ ಆಗಿರುವ ಶಂಕೆ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಯಲ್ಲಿರುವ ಪ್ರಯಾಣಿಕರಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ.

Advertisement

ಮೂಲಗಳ ಪ್ರಕಾರ, ವಾಸ್ಕೋ-ಡ-ಗಾಮಾ-ದೆಹಲಿ ಹಜರತ್ ನಿಜಾಮುದ್ದೀನ್  ಗೋವಾ ಎಕ್ಸ್‍ಪ್ರೆಸ್ ರೈಲಿನ ಎಂಟು ಪ್ರಯಾಣಿಕರು ಆಹಾರ ಸೇವನೆಯಿಂದ  ಪ್ರಯಾಣದಲ್ಲಿ ಹಠಾತ್ ತೊಂದರೆ ಉಂಟಾಗಿ ರಾತ್ರಿ ವೇಳೆಯಲ್ಲಿ ಪುರುಷ ಮತ್ತು ಮಹಿಳೆ ಪ್ರಯಾಣಿಕರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲಾ ಪ್ರಯಾಣಿಕರು ಮಧ್ಯಪ್ರದೇಶದ ಖಾಂಡ್ವಾ ನಿವಾಸಿಗಳು. ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದನ್ನು  ಗಮನಿಸಿದ ಸಹ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಬೆಳಗಾವಿಯಲ್ಲಿ ರೈಲನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ರೈಲು ಬೆಳಗಾವಿಗೆ ತಲುಪುತ್ತಿದ್ದಂತೆಯೇ ಈ ವಿಷಯವನ್ನು ಅಲ್ಲಿ ಸ್ಟೇಶನ್ ಮಾಸ್ಟರ್ ಗಮನಕ್ಕೆ ತರಲಾಗಿದೆ. ತಕ್ಷಣವೇ ರೈಲಿನಲ್ಲಿ ಅಸ್ವಸ್ಥಗೊಂಡಿದ್ದ 8 ಜನ ಪ್ರಯಾಣಿಕರನ್ನು ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next