Advertisement

ಉಗ್ರ ದಾಳಿ ಕಟ್ಟೆಚ್ಚರ ವಹಿಸದ ಗೋವಾ ಸರಕರ ವಜಾಕ್ಕೆ ಆಗ್ರಹ

04:05 PM Apr 14, 2018 | udayavani editorial |

ಪಣಜಿ : ಭಾರತೀಯ ಕರಾವಳಿ ರಕ್ಷಣಾ ಪಡೆ ಈಚೆಗೆ ಪಶ್ಚಿಮ ಕರಾವಳಿಯಲ್ಲಿ ಭಯೋತ್ಪಾದಕ ದಾಳಿ ನಡೆಯುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿರುವುದರಿಂದ ಕರಾವಳಿ ರಾಜ್ಯ ಸರಕಾರಗಳು ಕಟ್ಟೆಚ್ಚರ ವಹಿಸಬೇಕೆಂದು ಹೊರಡಿಸಿದ ಸೂಚನೆಯನ್ನು ಕಡಗಣಿಸಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದಿದ್ದ ಬಿಜೆಪಿ ನೇತೃತ್ವದ ಗೋವಾ ಸರಕಾರವನ್ನು ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ವಜಾ ಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. 

Advertisement

ಕೋಸ್ಟ್‌ ಗಾರ್ಡ್‌ ಎಚ್ಚರಿಕೆಗೆ ಅನುಗುಣವಾಗಿ ಮಹಾರಾಷ್ಟ್ರ, ಗುಜರಾತ್‌ ಮತ್ತು ಕೇರಳ ಸರಕಾರಗಳು ಕಟ್ಟೆಚ್ಚರ ವಹಿಸಿವೆ. ಆದರೆ ಗೋವಾ ಸರಕಾರ ಮುನ್ನೆಚ್ಚರಿಕೆಯನ್ನು ಕಡೆಗಣಿಸಿತು. ಗೋವೆಯ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿರುವ ಮನೋಹರ್‌ ಪರ್ರೀಕರ್‌ ಅವರು ಅಮೆರಿಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಅನುಪಸ್ಥಿತಿಯಲ್ಲಿ ಯಾರೂ ಜವಾಬ್ದಾರಿ ವಹಿಸಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಗಿರೀಶ್‌ ಛೋಡಣ್‌ಕರ್‌ ಆರೋಪಿಸಿದರು. 

ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ಗೋವಾ ಪೊಲೀಸರಿಗೆ ನೊಟೀಸ್‌ ಜಾರಿ ಮಾಡಿ ಕಟ್ಟೆಚ್ಚರದ ಮುನ್ಸೂಚನೆಯನ್ನು ಕಡೆಗಣಿಸಿದ್ದೇಕೆ ಎಂದು ಪ್ರಶ್ನಿಸಿ ಉತ್ತರ ಪಡೆಯಬೇಕು ಎಂದು ಛೋಡಣ್‌ಕರ್‌ ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next