ಪಣಜಿ:ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿಯನ್ನು ಹೊಗಳಿದ ಕೆಲವೇ ಹೊತ್ತಿನ ನಂತರ ಗೋವಾದ ಕಾಂಗ್ರೆಸ್ ಹಿರಿಯ ಮುಖಂಡ ಲೂಯಿನ್ಹೊ ಫಲೈರೋ ಸೋಮವಾರ(ಸೆಪ್ಟೆಂಬರ್ 27) ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:ಬಹುಮಹಡಿ ಕಟ್ಟಡ ಸುರಕ್ಷಿತವೇ?
ನಾವೆಲಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲು ಕಾರಣವನ್ನು ತಿಳಿಸಿದರು. ನಾನು ಸ್ವಚ್ಛ ಕಾಂಗ್ರೆಸ್ ಮನುಷ್ಯನಾಗಿದ್ದೆ. ಆದರೆ ಸದ್ಯ ರಾಜ್ಯದಲ್ಲಿ ಬಿಜೆಪಿ ಜನತೆಯ ಅವಹೇಳನವನ್ನು ನಡೆಸುತ್ತಿದೆ. ಬಿಜೆಪಿಯನ್ನು ತಡೆಯುವ ಅಗತ್ಯವಿದ್ದು, ಈ ಕೆಲಸವನ್ನು ತೃಣಮೂಲ ಕಾಂಗ್ರೇಸ್ ಮಾತ್ರ ಮಾಡಲು ಸಾಧ್ಯ ಎಂದರು.
ಸುಮಾರು 40 ವರ್ಷಗಳ ಕಾಲ ಗೋವಾ ಕಾಂಗ್ರೆಸ್ ಪಕ್ಷದಲ್ಲಿದ್ದ ಫಲೈರೋ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದು, ಭಾರತೀಯ ಜನತಾ ಪಕ್ಷಕ್ಕೆ ಕಠಿಣ ಸ್ಪರ್ಧೆಯೊಡ್ಡಲು ಮಮತಾ ಬ್ಯಾನರ್ಜಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ಅವರಿಗೆ ತೀವ್ರ ಹೋರಾಟ ನೀಡಿದ್ದು, ಈ ಕಾರಣದಿಂದಾಗಿಯೇ ಪಶ್ಚಿಮಬಂಗಾಳದಲ್ಲಿ ಟಿಎಂಸಿ ಪಕ್ಷ ಗೆಲುವು ಸಾಧಿಸಿದೆ ಎಂದು ಫಲೈರೋ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಇದೇ ದೇಶದಲ್ಲಿನ ನಿಜವಾದ ಕಾಂಗ್ರೆಸ್ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದ ಬಳಿ ಬಿಜೆಪಿಯ ವಿರುದ್ಧ ಹೋರಾಡುವ ಶಕ್ತಿ ಉಳಿದುಕೊಂಡಿಲ್ಲ. ಆದರೆ ಈ ಕೆಲಸವನ್ನು ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾನು ಕಾಂಗ್ರೆಸ್ ಪಕ್ಷ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದೆ ಎಂದು ಲುಯಿಜಿನ್ ಫಾಲೆರೊ ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಫಲೈರೋ ಟಿಎಂಸಿ ಸೇರ್ಪಡೆ ಬಗ್ಗೆ ಈವರೆಗೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಆದರೆ ಈ ಬಗ್ಗೆ ಫಲೈರೋ ಹೇಳಿಕೆ ನೀಡಬೇಕಾಗಿದೆ ಎಂದು ವರದಿ ತಿಳಿಸಿದೆ.