Advertisement

ಮಹದಾಯಿ ವಿವಾದ; 3ಶಾಸಕರ ಒತ್ತಡಕ್ಕೆ ಗೋವಾ ಸಿಎಂ ಮಣಿದಿದ್ದೇಕೆ?

02:56 PM Dec 21, 2017 | Sharanya Alva |

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯಲು ಆಶಾದಾಯಕ ಸೂತ್ರ ಹೊರಬೀಳಲಿದೆ ಎಂಬ ವಿಶ್ವಾಸದಲ್ಲಿ ಇದ್ದ ಸಂದರ್ಭದಲ್ಲಿಯೇ ಗೋವಾ ಫಾರ್ವರ್ಡ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಒತ್ತಡಕ್ಕೆ ಮಣಿದ ಗೋವಾ ಸಿಎಂ ಮನೋಹರ್ ಪರ್ರೀಕರ್ ಇದೀಗ ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ನೇತೃತ್ವದಲ್ಲಿ ನಡೆದ ಸಂಧಾನಕ್ಕೆ ಉಲ್ಟಾ ಹೊಡೆಯುವಂತಾಗಿದೆ.

Advertisement

ಮಹದಾಯಿ ವಿಚಾರದಲ್ಲಿ ಆಶಾದಾಯಕ ಅನುಮತಿ ನೀಡುವುದಾಗಿ ನಿನ್ನೆ ನಡೆದ ಸಭೆಯಲ್ಲಿ ಪರ್ರೀಕರ್ ಹೇಳಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.

ಏತನ್ಮಧ್ಯೆ ಗೋವಾಕ್ಕೆ ತೆರಳಿದ್ದ ಸಿಎಂಗೆ ಜಿಎಫ್ ಪಿ ಪಕ್ಷ ತೀವ್ರ ಅಸಮಾಧಾನ ಹೊರಹಾಕಿದೆ ಎಂದು ಮಾಧ್ಯಮದ ಮೂಲಗಳು ಹೇಳಿವೆ.

ಈ ಹಿನ್ನೆಲೆಯಲ್ಲಿ ತರುಣ್ ಭಾರತ್ ಪತ್ರಿಕೆಯ ಸಂದರ್ಶನದಲ್ಲಿ ಗೋವಾ ರಾಜ್ಯದ ಜನರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಕರ್ನಾಟಕದ ಬಿಜೆಪಿ ಮುಖಂಡರಿಗೆ ಶಾಕ್ ನೀಡಿದ್ದಾರೆ.

ಜಿಎಫ್ ಪಿ ಪಕ್ಷ ಬೆಂಬಲ ಹಿಂತೆಗೆದ್ರೆ ಪರ್ರೀಕರ್ ಸರ್ಕಾರಕ್ಕೆ ಕಂಟಕ!

Advertisement

ಗೋವಾ ಸರ್ಕಾರ ರಚನೆಯಲ್ಲಿ ಗೋವಾ ಫಾರ್ವರ್ಡ್ ಪಕ್ಷದ ಬೆಂಬಲ ಅತ್ಯಗತ್ಯವಾಗಿದೆ. ಮೂವರು ಶಾಸಕರು ಪರ್ರೀಕರ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲ ಗೋವಾ ಫಾರ್ವರ್ಡ್ ಪಕ್ಷ ಕರ್ನಾಟಕ ವಿರೋಧಿ ಧೋರಣೆ ಮೊದಲಿನಿಂದಲೂ ತಳೆದಿತ್ತು. ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸುವ ಬಗ್ಗೆ ಜಿಎಫ್ ಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈಗ ಜಿಎಫ್ ಪಿ ಪಕ್ಷದ ಒತ್ತಡಕ್ಕೆ ಪರ್ರೀಕರ್ ಮಣಿಯುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next