Advertisement

35ನೇಯ ಗೋವಾ ರಾಜ್ಯತ್ವ ದಿನ: ಮುಖ್ಯಮಂತ್ರಿಯಿಂದ ಅನಾಥ ಆಧಾರ ಯೋಜನೆ ಘೋಷಣೆ

05:06 PM May 30, 2021 | Team Udayavani |

ಪಣಜಿ: ರಾಜ್ಯದಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪಿರುವ ಆರ್ಥಿಕ ದೃಷ್ಠಿಯಿಂದ ದುರ್ಬಲರಿರುವ ಕುಟುಂಬಕ್ಕೆ 2 ಲಕ್ಷ ರೂ ಆರ್ಥಿಕ ಸಹಾಯ, ಕೋವಿಡ್ ನಿಂದ ಮೃತರಾದವರ ಮಕ್ಕಳಿಗೆ (ಹತ್ತನೇಯ ತರಗತಿಯ ಮೇಲಿನ ವಿದ್ಯಾರ್ಥಿಗಳಿಗೆ) ಉಚಿತ ಲ್ಯಾಪಟಾಪ್, ಮುಖ್ಯಮಂತ್ರಿ ಅನಾಥ ಆಧಾರ ಯೋಜನೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾಸಾವಂತ್ 35 ನೇಯ ಗೋವಾ ರಾಜ್ಯತ್ವ ದಿನದಂದು ಘೋಷಿಸಿದರು.

Advertisement

ಗೋವಾ ರಾಜ್ಯತ್ವ ದಿನದ ಅಂಗವಾಗಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಾವಂತ್- ಗೋವಾ ಒಂದು ರಾಜ್ಯ ಎಂದು ಘೋಷಣೆಯಾಗುವ ಮುನ್ನ ಗೋವಾ ದಮನ್ ಮತ್ತು ದೀವ್ ಎಂಬ ಹೆಸರಿತ್ತು. ಇದರಿಂದಾಗಿ ರಾಜ್ಯದಲ್ಲಿ ಹಲವು ಖಾಯ್ದೆಗಳು ಅದೇ ಹೆಸರಿನಲ್ಲೇ ಇದೆ. ಈ ಖಾಯ್ದೆಯಲ್ಲಿ ತಿದ್ಧುಪಡಿ ತಂದು ಗೋವಾ ದಮನ್ ಮತ್ತು ದೀವ್ ಎಂದು ಇದ್ದುದನ್ನು ಕೇವಲ ಗೋವಾ ಎಂದಷ್ಟೇ ಇಡಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

ರಾಜ್ಯದಲ್ಲಿ ಕರೋನಾದಿಂದಾಗಿ ಅನೇಕ ಕುಟುಂಬದಲ್ಲಿನ ದುಡಿಯುವ ಸದಸ್ಯರೇ ನಿಧನರಾಗಿದ್ದಾರೆ. ಇಂತಹ ಬಡ ಕುಟುಂಬಗಳಿಗೆ ಆರ್ಥಿಕ ದೃಷ್ಠಿಯಿಂದ ಸರ್ಕಾರ 2 ಲಕ್ಷ ರೂ ನೀಡಲಿದೆ. ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಶೀಘ್ರವೇ ಲಸಿಕಾ ಕಾರ್ಯ ಪೂರ್ಣಗೊಳಿಸಲಾಗುವುದು. 18 ರಿಂದ 45 ವರ್ಷದ ವರೆಗಿನ ಜನರಿಗೆ ಜೂನ್ 3 ರಿಂದ ಲಸಿಕಾ ಅಭಿಯಾನವನ್ನು ಆರಂಭಿಸಲಾಗುವುದು. 2 ವರ್ಷದ ಒಳಗಿನ ಮಕ್ಕಳ ಪಾಲಕರಿಗೆ, ರೋಗಗೃಸ್ಥ ಜನರಿಗೆ, ರಿಕ್ಷಾ ಚಾಲಕರಿಗೆ, ಬಾಡಿಗೆ ಬೈಕ್ ಚಾಲಕರಿಗೆ, ಅಂಗವಿಕಲರಿಗೆ, ಮೊದಲು ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next