ಪಣಜಿ: ದೇವರು, ದೇಶ ಮತ್ತು ಧರ್ಮವನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂಗಳ ಕರ್ತವ್ಯ. ಈ ಭೂಮಿಯಲ್ಲಿ ಅನೇಕ ಯೋಗಪುರುಷರು ಹಿಂದೂ ಧರ್ಮವನ್ನು ರಕ್ಷಿಸಲು ಜನಿಸಿದರು. ಹಬ್ಬ ಹರಿದಿನಗಳ ಮೂಲಕ ಮುಂದಿನ ಪೀಳಿಗೆಗೆ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕರೆ ನೀಡಿದರು.
ಯುಗಾದಿ ಪ್ರಯುಕ್ತ ಹೊಸ ವರ್ಷ ಸ್ವಾಗತ ಸಮಿತಿ ಸಾಖಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿದ್ದು ಮಾತನಾಡಿದರು.
ನಮ್ಮ ದೇಶ ಧರ್ಮವನ್ನು ರಕ್ಷಿಸಲು ಪ್ರತಿಯೊಬ್ಬರೂ ಕೂಡ ಕಂಕಣಬದ್ಧರಾಗಬೇಕು. ಈ ಹಿಂದಿನಿಂದ ನಮ್ಮ ಧರ್ಮವನ್ನು ರಕ್ಷಿಸಲು ಸಂತರು, ಯೋಗಪುರುಷರು ಅವತರಿಸಿದ್ದರು. ಈ ಸನಾತನ ಧರ್ಮವನ್ನು ನಾವು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಭಾರತ್ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಹಾಗೂ ಪತಂಜಲಿ ಯೋಗ ಶಿಕ್ಷಕರಾದ ಡಾ. ಕಮಲೇಶ ಬಾಂದೇಕರ್, ರಾಧಾಕೃಷ್ಣ ದೇವಸ್ಥಾನ ಸಮೀತಿ ಅಧ್ಯಕ್ಷ ರಾಜದತ್ತ ಮಾಪಾರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರೇಮಾನಂದ ಶೇಟ್ ವೆಲಿಂಗಕರ್ ರವರು ವಚನ ಗಾಯನ ಹಾಡಿದರು. ಶುಭದಾ ಸಾವೈಕರ್ ಕಾರ್ಯಕ್ರಮ ನಿರೂಪಿಸಿದರು. ರಾಧಿಕಾ ಸಾತೊಸ್ಕರ್ ವಂದಿಸಿದರು.