ಪಣಜಿ : ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಕರ್ಫ್ಯೂ ಜೂನ್ 7 ರಂದು ಮುಕ್ತಾಯಗೊಳ್ಳಲ್ಲಿದ್ದು, ರಾಜ್ಯದಲ್ಲಿ ಕೋವಿಡ್ ಪರಸ‍್ಥಿತಿಯನ್ನು ಪರಿಶೀಲಸಿ ತಜ್ಞರು ಹಾಗೂ ಅಧಿಕಾರಿಗಳ ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು ರಾಜ್ಯದಲ್ಲಿ ಕಫ್ರ್ಯೂ ಮುಂದುವರಿಸಬೇಕೆ..? ಅಥವಾ ಸಡಿಲಿಕೆ , ವಿನಾಯತಿ ನೀಡಬಹುದೇ…? ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಕಫ್ರ್ಯೂ ಮುಕ್ತಾಯಗೊಳ್ಳುವ ಒಂದು ದಿನ ಮುಂಚೆ ಅಂದರೆ ಜೂನ್ 6 ರಂದು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಡಿ.ಕೆ.ಶಿವಕುಮಾರ್, ಈಶ್ವರ್ ಖಂಡ್ರೆ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಫ್ಯೂ ಯಶಸ್ವಿಯಾಗಿದೆ ಎಂದು ಹೇಳುವುದಕ್ಕಿಂತ ಕೋವಿಡ್ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ, ಕೋವಿಡ್ ಸೋಂಕಿನ ಹೊಸ ಪ್ರಕರತಣಗಳ ಸಂಖ್ಯೆ ಇಳಿಮುಖವಾಗಿದೆ. ಜನರು ಎಷ್ಟು ಪ್ರಮಾಣದಲ್ಲಿ ನಿಯಮಗಳ ಪಾಲನೆ ಮಾಡುತ್ತಿದ್ದಾರೆ ಎಂಬುದು ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ.
ಇನ್ನು, ರಾಜ್ಯದಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿದರೂ ಕೂಡ ಎಲ್ಲಿಯೂ ಕೂಡ ಜನದಟ್ಟಣೆಯಾಗದಂತೆ ನೋಡಿಕೊಳ್ಳುವುದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅತ್ಯಾವಶ್ಯಕವಾಗಿದೆ. ಇಲ್ಲವಾದಲ್ಲಿ ಮತ್ತೆ ಕೋವಿಡ್ ಮೂರನೇಯ ಅಲೆಯ ಲಾಕ್ ಡೌನ್ ಜಾರಿಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ 3000 ಕ್ಕೂ ಹೆಚ್ಚು ಹೊಸ ಸೋಂಕಿನ ಪ್ರಕರಣಗಳು ದಾಖಲೆಯಾಗುತ್ತಿದ್ದಾಗ ಮತ್ತು ಸುಮಾರು 75 ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮೇ 9 ರಿಂದ ಕರ್ಫ್ಯೂ ಜಾರಿಗೊಳಿಸಿತ್ತು. ಆ ಕರ್ಫ್ಯೂ ಜೂನ್ 7 ರಂದು ಮುಕ್ತಾಯಗೊಳ್ಳಲಿದ್ದು, ಸರ್ಕಾರ ಕರ್ಫ್ಯೂ ಸಡಿಲಿಕೆ ಮಾಡಲಿದೆಯೋ ಅಥವಾ ಕಠಿಣ ನಿಯಮಗಳನ್ನು ಮುಂದುವರೆಸಲಿದೆಯೋ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ಒಂದು ನಿಜ ಹೇಳ್ಲಾ..? ‘ಮನಸ್ಸು’ ನಿಮ್ಮ ಅತ್ಯಾಪ್ತ ಸ್ನೇಹಿತ ಅಂತ ನಿಮಗೆ ಗೊತ್ತೇ ಇಲ್ಲ..!