Advertisement
ಗೋವಾದ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸೇರಿದಂತೆ 7 ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಗೋವಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಾ. ಪ್ರಮೋದ್ ಸಾವಂತ್ ಈ ಕುರಿತು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ 7 ಜನ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಗೋವಾ ಸರ್ಕಾರದ ಸಂಪುಟದಲ್ಲಿ ಎಂಜಿಪಿ ಪಕ್ಷದ ಸುದೀನ ಧವಳೀಕರ್, ಕುಡತರಿ ಕ್ಷೇತ್ರದ ಪಕ್ಷೇತರ ಶಾಸಕ ಅಲೆಕ್ಸ ರೆಜಿನಾಲ್ಡ , ಡಾ. ಚಂದ್ರಕಾಂತ ಅರವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ರವಿ ನಾಯ್ಕ, ಸುಭಾಷ್ ಶಿರೋಡ್ಕರ್, ಮಾವಿನ್ ಗುದಿನ್ಹೊ, ಬಾಬುಶ್ ಮೊನ್ಸೆರಾತ್, ವಿಶ್ವಜಿತ್ ರಾಣೆ, ರೋಹನ್ ಖಂವಟೆ ಮತ್ತು ನೀಲೇಶ್ ಕಾಬ್ರಾಲ್ ರವರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡುವುದು ಖಚಿತ ಎಂದೇ ಹೇಳಲಾಗುತ್ತಿದೆ. ಉತ್ತರ ಗೋವಾಕ್ಕೆ ಮೂರು ಹಾಗೂ ದಕ್ಷಿಣ ಗೋವಾಕ್ಕೆ ಮೂರು ಸಚಿವ ಸ್ಥಾನ ನೀಡಲಾಗುವುದು. ಇದಲ್ಲದೆಯೇ ಪಕ್ಷೇತರರು ಮತ್ತು ಎಂಜಿಪಿ ಪಕ್ಷದ ಶಾಸಕ ಧವಳೀಕರ್ ರವರಿಗೂ ಸ್ಥಾನ ಲಭಿಸುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಮುಖ್ಯಮಂತ್ರಿಯ ನಂತರ ವಿಶ್ವಜಿತ್ ರಾಣೆ ಎರಡನೇಯ ಸ್ಥಾನದ ಹುದ್ದೆ ಪಡೆದುಕೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ : ಹೈದರಾಬಾದ್: ಭೀಕರ ಕಾರು ಅಪಘಾತದಲ್ಲಿ ತೆಲುಗು ನಟಿ ಗಾಯತ್ರಿ ಸಾವು