ಪಣಜಿ: ಸುಪ್ರೀಂಕೋರ್ಟ್ ನೀಡಿರುವ ತೀರ್ಪಿ ಅನ್ವಯ ಗುರುವಾರ ಭಾರತೀಯ ಜನತಾ ಪಕ್ಷ ನೇತೃತ್ವದ ಗೋವಾ ಸರ್ಕಾರ ಬಹುಮತ ಪರೀಕ್ಷೆಯಲ್ಲಿ 40 ಸದಸ್ಯ ಬಲದ ವಿಧಾನಸಭೆಯಲ್ಲಿ 22 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದೆ.
40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 21 ಸದಸ್ಯರ ಬೆಂಬಲದ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನೇತೃತ್ವದ ಬಿಜೆಪಿ ಮೈತ್ರಿಕೂಟದ ಸರ್ಕಾರ ಅಗ್ನಿಪರೀಕ್ಷೆಯಲ್ಲಿ 22 ಸದಸ್ಯರ ಬೆಂಬಲ ಗಳಿಸುವ ಮೂಲಕ ಜಯ ಸಾಧಿಸಿದೆ.
ಕಾಂಗ್ರೆಸ್ 16 (ಒಬ್ಬ ಕಾಂಗ್ರೆಸ್ ಸದಸ್ಯರು ಕಲಾಪದಿಂದ ಹೊರನಡೆದಿದ್ದರು) ಮತ ಪಡೆಯುವ ಮೂಲಕ ಬಹುಮತ ಸಾಬೀತಿನಲ್ಲೂ ಮುಖಭಂಗ ಅನುಭವಿಸಿದೆ. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಆದರೆ ಗವರ್ನರ್ ಅವರು ಸರ್ಕಾರ ರಚನೆಗೆ ಬಿಜೆಪಿಯನ್ನು ಆಹ್ವಾನಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಮನೋಹರ್ ಪರ್ರಿಕರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿ, ಮಾ.16ರಂದು ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಿತ್ತು.
ಬಲಾಬಲ ಪರೀಕ್ಷೆ: ಬಹುಮತಕ್ಕೆ ಬೇಕಾದ ಮತ 21
ಬಿಜೆಪಿ 13
ಎಂಜಿಪಿ 03
ಜಿಎಫ್ ಪಿ 03
ಎನ್ ಸಿಪಿ 01
ಪಕ್ಷೇತರರು 02
ಕಾಂಗ್ರೆಸ್(17) 16
ಒಬ್ಬ ಸದಸ್ಯರು ಕಲಾಪದಿಂದ ಹೊರನಡೆದಿದ್ದರು.