ಪಣಜಿ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಗೋವಾ ರಾಜ್ಯದಲ್ಲಿ 12 ಜನ ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಗೋವಾದಲ್ಲಿ ಬ್ಲ್ಯಾಕ್ ಫಂಗಸ್‍ನ 7 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಅಂಕಿ ಅಂಶಗಳನ್ನು ಗೋವಾ ಸರ್ಕಾರ ಮುಚ್ಚಿಡುತ್ತಿದೆಯೇ…? ಇಂತಹದ್ದೊಂದು ಅನುಮಾನ ಮೂಡುವಂತಾಗಿದೆ. ಗೋವಾ ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯ ಅನುಸಾರ ರಾಜ್ಯದಲ್ಲಿ 7 ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ. ಈ ಪೈಕಿ ಒಬ್ಬ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, 6 ಜನ ಸೋಂಕಿತರು ಗೋವಾ ಬಾಂಬೋಲಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೋವಾ ವೈದ್ಯಕೀಯ ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಲಂಕಾ ತಂಡಕ್ಕೆ ಕೋವಿಡ್ ಕಾಟ: ಆಟಗಾರನಿಗೆ ಪಾಸಿಟಿವ್ ಇದ್ದರೂ ಬಾಂಗ್ಲಾ ವಿರುದ್ಧ ಪಂದ್ಯ ಆರಂಭ
ಆದರೆ ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ಗೋವಾದಲ್ಲಿ ಇನ್ನುಳಿದ ಬ್ಲ್ಯಾಕ್ ಫಂಗಸ್ ಸೋಂಕಿತರನ್ನು ಸರ್ಕಾರ ಮುಚ್ಚಿಡುತ್ತಿದೆಯೇ…? ಇಂತದ್ದೊಂದು ಅನುಮಾನ ಇದೀಗ ಮೂಡುವಂತಾಗಿದೆ.
ದೀರ್ಘ ಕಾಲದ ವರೆಗೆ ಸ್ಟೀರಾಯ್ಡ ನೀಡಲ್ಪಟ್ಟ, ದೀರ್ಘಕಾಲದ ವರೆಗೆ ಆಸ್ಪತ್ರೆಗೆ ದಾಖಲಾದ, ಆಮ್ಲಜನಕದ ಬೆಂಬಲ ಅಥವಾ ವೆಂಟಿಲೇಟರ್‍ನಲ್ಲಿದ್ದ , ಇತರ ಖಾಯಿಲೆಗಳ ಔಷಧಿ ತೆಗೆದುಕೊಳ್ಳುತ್ತಿರುವ ರೋಗಿಗಳಲ್ಲಿ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗುತ್ತಿದೆ. ಇಂತಹ ಆತಂಕಕರ ಪರಿಸ್ಥಿತಿಯಲ್ಲಿ ಗೋವಾದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಲೆಕ್ಕಾಚಾರ ಸರಿಯಾಗಿಲ್ಲದಿರುವುದು ರಾಜ್ಯದಲ್ಲಿ ಇನ್ನಷ್ಟು ಆತಂಕ ಸೃಷ್ಠಿಸಿದೆ.