Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂದ್ರೆಮ್ ಕ್ಷೇತ್ರದಲ್ಲಿ ಜಯಗಳಿಸುವ ಸಾಮರ್ಥ್ಯವನ್ನು ಪರಿಗಣಿಸಿ ಬಿಜೆಪಿಯು ದಯಾನಂದ ಸೋಪ್ಟೆ ರವರಿಗೆ ಟಿಕೆಟ್ ನೀಡಿದೆ. ಆದರೆ ಈ ಕುರಿತು ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ರವರು ತೆಗೆದುಕೊಂಡಿರುವ ನಿರ್ಣಯ ದುರ್ದೈವದ ಸಂಗತಿ.ಉತ್ಪಲ್ ಪರ್ರಿಕರ್ ತೆಗೆದುಕೊಂಡಿರುವ ನಿರ್ಣಯವು ದುಃಖಕರ ಸಂಗತಿಯಾಗಿದೆ. ಆದರೆ ಅವರ ನಿರ್ಣಯದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದಿದ್ದಾರೆ.
Related Articles
Advertisement
‘ದಿ. ಮನೋಹರ್ ಪರ್ರಿಕರ್ ರವರು ಬಿಜೆಪಿಗೆ ಶಕ್ತಿ ನೀಡಿದ್ದರೂ ಅವರ ಪುತ್ರ ಟಿಕೆಟ್‍ಗಾಗಿ ಅಂಗಳಕ್ಕೆ ಓಡುತ್ತಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಶೂ ಪಾಲಿಶ್ ಮಾಡುವಲ್ಲಿ ನಿರತವಾಗಿರುವ ಬಿಜೆಪಿಯನ್ನು ಮನೆಗೆ ಕಳುಹಿಸಲಾಗುವುದು’ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಮೈಕಲ್ ಲೋಬೊ ವಾಗ್ದಾಳಿ ನಡೆಸಿದ್ದಾರೆ.
ಕಲಂಗುಟ್‍ನಲ್ಲಿ ಮೈಕಲ್ ಲೋಬೊ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಕ್ತ ಚುನಾವಣೆಯಲ್ಲಿ ಉತ್ಪಲ್ ಪರ್ರಿಕರ್ ಪಣಜಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಫರ್ಧಿಸುವ ಇಚ್ಛೆ ಹೊಂದಿದ್ದರು. ಆದರೆ ಉತ್ಪಲ್ ರವರು ಸ್ಫರ್ಧಿಸಿದರೆ ಗೆಲುವಿನ ಸಾಧ್ಯತೆ ಕಡಿಮೆ ಎಂದು ಪಕ್ಷವು ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಸುದ್ಧಿಯೂ ರಾಜ್ಯದಲ್ಲಿ ಹರಿದಾಡುತ್ತಿದೆ ಎಂದರು.