Advertisement

ಗೋವಾ –ಬೆಳಗಾವಿ ಗಡಿಯಲ್ಲಿ ಹೆಚ್ಚಿದ ತಪಾಸಣೆ : ವ್ಯಾಪಾರಸ್ಥರಲ್ಲಿ ಆತಂಕ

07:32 PM Aug 12, 2021 | Team Udayavani |

ಪಣಜಿ: ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ 18 ವರ್ಷದೊಳಗಿನ ಮಕ್ಕಳಿಗೆ ಕರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಗೋವಾದಿಂದ ಕರ್ನಾಟಕದ ಬೆಳಗಾವಿಗೆ ತೆರಳಬೇಕಾದರೆ RTPCR ನೆಗೆಟಿವ್ ವರದಿ ಹೊಂದಿರುವುದು ಖಡ್ಡಾಯಗೊಳಿಸಲಾಗಿದೆ. ಈ ಕುರಿತು ಗೋವಾ ಬೆಳಗಾವಿ ಗಡಿಯಲ್ಲಿ ಖಡ್ಡಾಯ ತಪಾಸಣೆ ನಡೆಸಲಾಗುತ್ತಿದ್ದು ಆಗಸ್ಟ್ 15 ರಿಂದ ಇನ್ನೂ ಹೆಚ್ಚು ಕಟ್ಟೆಚ್ಚರ ವಹಿಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.

Advertisement

ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೂಡ ಗೋವಾದಿಂದ ಬೆಳಗಾವಿಗೆ ತೆರಳಬೇಕಾದರೆ ಗಡಿಯಲ್ಲಿ RTPCR ವರದಿಯನ್ನು ಕೇಳಲಾಗುತ್ತಿದೆ. ಇದರಿಂದಾಗಿ ಗೋವಾದಿಂದ ಬೆಳಗಾವಿ ಭಾಗಕ್ಕೆ ತೆರಳುವವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ :ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಕ್ರಮ : ಸಚಿವ ಪ್ರಭು ಚವ್ಹಾಣ್

ವ್ಯಾಪಾರ-ಉದ್ಯೋಗ ದೃಷ್ಠಿಯಿಂದ ಗೋವಾ ಮತ್ತು ಬೆಳಗಾವಿ ಹೆಚ್ಚಿನ ಸಂಪರ್ಕ ಹೊಂದಿದೆ. ಪ್ರತಿದಿನ ವಿವಿಧ ವಸ್ತುಗಳ ಖರೀದಿಗಾಗಿ ಗೋವಾದಿಂದ ಬೆಳಗಾವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಬೆಳೆಸುತ್ತಾರೆ. ಆದರೆ ಇದೀಗ ಗೋವಾದಿಂದ ಬೆಳಗಾವಿಗೆ ತೆರಳಲು ಆರ್‍ಟಿಪಿಸಿಆರ್ ಖಡ್ಡಾಯಗೊಳಿಸಿರುವುದು ವ್ಯಾಪಾರ ವ್ಯವಹಾರಕ್ಕಾಗಿ ತೆರಳುವವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next