Advertisement

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

01:21 AM Sep 21, 2024 | Team Udayavani |

ಪಣಜಿ: ಗೋವಾದಲ್ಲಿ ಸಮುದ್ರ ತೀರದಲ್ಲಿ ಮದುವೆಯಾಗಲು ಅನುಮತಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಒಂದು ದಿನದ ವಿವಾಹಕ್ಕೆ 1 ಲಕ್ಷ ರೂ. ಶುಲ್ಕ ಪಡೆಯಲು ಗೋವಾ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರ (ಜಿಸಿಜೆಡ್‌ಎಂಎ) ನಿರ್ಧರಿಸಿದೆ. ಕಳೆದ ವರ್ಷ ಮೇಯಲ್ಲಿ ಇದೇ 1 ಲಕ್ಷ ರೂ.ಗೆ 5 ದಿನಗಳಿಗೆ ಅನುಮತಿ ನೀಡಲಾಗುತ್ತಿತ್ತು. ಈಗ 1 ದಿನಕ್ಕೆ 1 ಲಕ್ಷ ರೂ. ನಿಗದಿಯಾಗಿದೆ. ಪ್ರತೀ ಹೆಚ್ಚುವರಿ ದಿನದ ಕಾರ್ಯಕ್ರಮಗಳಿಗೆ 10 ಸಾವಿರ ರೂ. ವಿಧಿಸಲು ನಿರ್ಧ ರಿಸಲಾಗಿದೆ. ಈ ಪರಿಷ್ಕೃತ ದರಗಳು ಮದುವೆಯಷ್ಟೇ ಅಲ್ಲದೆ ಮತ್ತಿತರ ಖಾಸಗಿ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next