ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಯಾಗುತ್ತಿದ್ದು, ಬುಧವಾರ ಶಿವಸೇನೆ ಮತ್ತು ಎನ್‍ಸಿಪಿ ಮೈತ್ರಿ ಘೋಷಿಸಿದೆ.
ಶಿವಸೇನೆ ಸಂಸದ ಸಂಜಯ ರಾವುತ್ ಮತ್ತು ಎನ್‍ಸಿಪಿ ಸಂಸದ ಪ್ರಫುಲ್ ಪಟೇಲ್ ರವರು ಪಣಜಿಯಲ್ಲಿ ಜಂಟಿ ಸುದ್ಧಿಗೋಷ್ಠಿಯಲ್ಲಿ, ನಮ್ಮದು ಸ್ಥಾನಕ್ಕಾಗಿ ಯಾವುದೇ ವಿವಾದವಿಲ್ಲ. ಸಮಯ ಬಂದರೆ ಶಿವಸೇನೆ ಒಂದು ಹೆಜ್ಜೆ ಹಿಂದೆ ಸರಿಯುತ್ತದೆ ಅಥವಾ ಎನ್‍ಸಿಪಿ ಒಂದು ಹೆಜ್ಜೆ ಹಿಂದೆ ಸರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಸೇನೆಯ ಸಂಜಯ್ ರಾವುತ್, ಪಕ್ಷ ಸಂಘಟನೆಯು ಆಯಾ ರಾಮ್ ಗಯಾರಾಮ್ ಮಾಡಿದರೆ ಸಾಧ್ಯವಿಲ್ಲ. ಅದಕ್ಕಾಗಿ ದುಡಿಯಬೇಕು ಎಂದು ಹೇಳಿ ಪಕ್ಷಾಂತರ ಮಾಡುವ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಗೋವಾದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ನಾವು ಸ್ಫರ್ಧಿಸುವುದಿಲ್ಲ. ಮಹಾರಾಷ್ಟ್ರದಂತೆ ಗೋವಾದಲ್ಲಿಯೂ ಮಹಾಘಟಬಂಧನ ಸ್ಥಾಪಿಸುವ ಕುರಿತಂತೆ ಶಿವಸೇನೆಯ ಸಂಜಯ ರಾವುತ್ ಇಂಗಿತ ವ್ಯಕ್ತಪಡಿಸಿದರು.
ಕಾಂಗ್ರೆಸ್ ಇಲ್ಲ
ಮಹಾರಾಷ್ಟ್ರದಲ್ಲಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಇದೆ ಆದರೆ ಗೋವಾದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ಮೈತ್ರಿಕೂಟವನ್ನು ಸೇರಿಲ್ಲ.