Advertisement

ನ.4ರಂದು ದೆಹಲಿಗೆ ಗೋವಾ ಸರ್ವ ಪಕ್ಷ ನಿಯೋಗ

09:13 PM Nov 01, 2019 | Team Udayavani |

ಪಣಜಿ:ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಸರ್ವ ಪಕ್ಷ ನಿಯೋಗವು ನ.4ರಂದು ದೆಹಲಿಗೆ ತೆರಳಲು ನಿರ್ಧರಿಸಿದ್ದು, ಮುಖ್ಯಮಂತ್ರಿ ಪ್ರಮೋದ ಸಾವಂತ್‌ ನೇತೃತ್ವದಲ್ಲಿ ದೆಹಲಿಯಲ್ಲಿ ಕೇಂದ್ರ ಪರಿಸರ ಮಂತ್ರಿ ಪ್ರಕಾಶ್‌ ಜಾವಡೇಕರ್‌ ಅವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ನಾಲಾ ಯೋಜನೆಗೆ ನೀಡಿರುವ ಪರವಾನಗಿ ಹಿಂಪಡೆಯುವಂತೆ ಮನವಿ ಮಾಡಲಿದ್ದಾರೆ.

Advertisement

ಕೇಂದ್ರ ಆಯುಷ್‌ ಮಂತ್ರಿ ಶ್ರೀಪಾದ ನಾಯ್ಕ, ರಾಜ್ಯಸಭಾ ಸದಸ್ಯ ವಿನಯ್‌ ತೆಂಡುಲ್ಕರ್‌, ಜಲಸಂಪನ್ಮೂಲ ಸಚಿವ ಫಿಲಿಪ್‌ ನೇರಿ ರೋಡ್ರಿಗಸ್‌, ಕಾಂಗ್ರೆಸ್‌, ಎಂಜಿಪಿ, ಗೋವಾ ಫಾರ್ವರ್ಡ್‌ ಪಕ್ಷದ ಪ್ರತಿನಿಧಿಗಳು ಕೂಡ ದೆಹಲಿಗೆ ತೆರಳಲಿದ್ದಾರೆ. ಮಹದಾಯಿ ಬಚಾವ್‌ ಅಭಿಯಾನದ ನಿರ್ಮಲಾ ಸಾವಂತ್‌, ರಾಜೇಂದ್ರ ಕೇರಕರ್‌ ಸಾಥ್‌ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next