Advertisement

“ಸೋಲಿಗೆ ಎದೆಗುಂದದೆ ಗೆಲುವಿನತ್ತ  ಸಾಗಬೇಕು’

07:20 AM Aug 03, 2017 | Team Udayavani |

ಕಡಬ : ಸ್ಪರ್ಧೆಯಲ್ಲಿ ಸೋಲು ಮತ್ತು ಗೆಲುವು ಎನ್ನುವುದು ಸಹಜ. ಸೋಲಿದ್ದರೆ ಮಾತ್ರ ಗೆಲುವಿಗೆ ಮಹತ್ವ ಬರುತ್ತದೆ. ಆದುದರಿಂದ ಸೋಲಿಗೆ ಎದೆಗುಂದದೆ ಗೆಲುವಿನತ್ತ ಸಾಗುವುದೇ ನಿಜವಾದ ಜೀವನ ಎಂದು ವಿದ್ಯಾಭಾರತಿ ಕರ್ನಾಟಕ ಇದರ ಪ್ರಾಂತ ಶಾರೀರಿಕ್‌ ಪ್ರಮುಖ್‌ ಆನಂದ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

Advertisement

ಬುಧವಾರ ಕಡಬದ ಹನುಮಾನ್‌ ನಗರದಲ್ಲಿರುವ ಸರಸ್ವತೀ ಪ.ಪೂ. ವಿದ್ಯಾಲಯದ ಕ್ರೀಡಾಂಗಣದಲ್ಲಿ  ಜರಗಿದ ವಿದ್ಯಾಭಾರತಿ ಸಂಯೋಜಿತ ವಿದ್ಯಾಸಂಸ್ಥೆಗಳ ದ.ಕ. ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ  ದೈಹಿಕ, ಬೌದ್ಧಿಕ ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ನಿರಂತರ ಅಭ್ಯಾಸ ಮತ್ತು ಕಠಿನ ಪರಿಶ್ರಮದ ಮೂಲಕ ನಾವು ಗುರಿಯನ್ನು ಯಶಸ್ವಿಯಾಗಿ ತಲುಬಹುದು ಎನ್ನುವ ಪಾಠ ಕ್ರೀಡಾ ಸ್ಪರ್ಧೆಗಳಿಂದ ಲಭಿಸುತ್ತದೆ ಎಂದರು. 

ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ರವಿರಾಜ ಶೆಟ್ಟಿ ಕಡಬ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವಂತ ಯುವ ಸಮುದಾಯದ ನಿರ್ಮಾಣಕ್ಕೆ ಕ್ರೀಡೆಗಳು ಪೂರಕ ಎಂದರು. 

ಸಾಮರ್ಥ್ಯ ವ್ಯಕ್ತ
ಮುಖ್ಯ ಅತಿಥಿಯಾಗಿದ್ದ  ಪ್ರಶಸ್ತಿ ವಿಜೇತ ಹಿರಿಯ ಕ್ರೀಡಾ ತೀರ್ಪುಗಾರ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್‌ ಅವರು ಮಾತನಾಡಿ, ಪ್ರತಿಯೊಬ್ಬ  ಕ್ರೀಡಾಳು  ಕೂಡ ತನ್ನೊಳಗೆ ಅವ್ಯಕ್ತವಾದ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಅದನ್ನು ಹೊರತರುವ ಪ್ರಯತ್ನವೇ ಈ ರೀತಿಯ ಕ್ರೀಡಾಕೂಟಗಳು ಎಂದರು. ವಿದ್ಯಾಭಾರತಿಯ ದ.ಕ. ಜಿಲ್ಲಾ ಶಾರೀರಿಕ್‌ ಪ್ರಮುಖ್‌ ಕರುಣಾಕರ, ಸರಸ್ವತೀ ವಿದ್ಯಾಲಯದ ಕೋಶಾಧಿಕಾರಿ ಲಿಂಗಪ್ಪ ಜೆ., ಆಡಳಿತ ಮಂಡಳಿಯ ಸದಸ್ಯರಾದ ಸೀತಾರಾಮ ಎ., ಹರೀಶ್‌ ಉಂಡಿಲ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಶೈಲಾಶ್ರೀ ರೈ ಎಸ್‌., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಾಧವ ಕೋಲ್ಪೆ, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಆರಿಗ ಉಪಸ್ಥಿತರಿದ್ದರು.

Advertisement

ಸರಸ್ವತೀ ಪ.ಪೂ.ವಿದ್ಯಾಲಯದ ಪ್ರಾಂಶುಪಾಲ ಮಹೇಶ್‌ ನಿಟಿಲಾಪುರ ಅವರು ಸ್ವಾಗತಿಸಿ, ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್‌ ಪ್ರಸ್ತಾವನೆಗೈದರು. ಶಿಕ್ಷಕಿ ಸುಪ್ರೀತಾ ಸುರೇಶ್‌ ನಿರೂಪಿಸಿ, ಶಿಕ್ಷಕ ಶಿವಪ್ರಸಾದ್‌ ವಂದಿಸಿದರು. ದೈ.ಶಿ. ಶಿಕ್ಷಕರಾದ ಬಾಲಕೃಷ್ಣ  ರೈ  (ಓಂತ್ರಡ್ಕ ಶಾಲೆ), ಸತೀಶ್ಚಂದ್ರ ಕೇವಳ (ಕ್ನಾನಾಯ ಜ್ಯೋತಿ ಶಾಲೆ), ರಾಜೇಶ್‌ ನಾೖಕ್‌ (ಮರ್ದಾಳ ಸೈಂಟ್‌ ಮೇರಿಸ್‌ ಶಾಲೆ) ಹಾಗೂ ಬಾಲಕೃಷ್ಣ ಗೌಡ (ನೂಜಿಬಾಳ್ತಿಲ ಶಾಲೆ) ಅವರು ತೀರ್ಪುಗಾರರಾಗಿ ಸಹಕರಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next