Advertisement

ಪಿಎಂಸಿ ಬ್ಯಾಂಕ್ ವಂಚನೆ ಕೇಸ್-ಹೈಕೋರ್ಟ್ ಗೆ ಹೋಗಿ; ದೂರುದಾರರಿಗೆ ಸುಪ್ರೀಂಕೋರ್ಟ್

11:45 AM Oct 19, 2019 | Team Udayavani |

ನವದೆಹಲಿ: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆಯಿಂದಾಗಿ ಸಾವಿರಾರು ಗ್ರಾಹಕರ ಠೇವಣಿ ಹಣಕ್ಕೆ ಭದ್ರತೆ ನೀಡಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

Advertisement

ಒಂದು ವೇಳೆ ಅಗತ್ಯವಿದ್ದರೆ ಗ್ರಾಹಕರು ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಸಿಜೆಐ ರಂಜನ್ ಗೋಗೊಯಿ ಅರ್ಜಿದಾರರಿಗೆ ತಿಳಿಸಿದೆ. ಈ ಪ್ರಕರಣದಲ್ಲಿ ನಾಲ್ಕು ರಾಜ್ಯಗಳು ಭಾಗಿಯಾಗಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತಿರುವುದಾಗಿ ದೂರುದಾರ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ಆರಂಭಿಸಿದ್ದು, ಬ್ಯಾಂಕ್ ಗೆ ಸಂಬಂಧಿಸಿದ 88 ಆಸ್ತಿ-ಪಾಸ್ತಿಯನ್ನು ಜಪ್ತಿಗೊಳಿಸಿರುವುದಾಗಿ ಸಾಲಿಸಿಟರ್ ಜನರಲ್ ಸರಕಾರ ನೀಡಿರುವ ಮಾಹಿತಿಯನ್ನು ಸುಪ್ರೀಂಗೆ ತಿಳಿಸಿದರು.

ಏತನ್ಮಧ್ಯೆ ದೂರುದಾರರು, 127 ಶಾಖೆಗಳಲ್ಲಿ ಸಾವಿರಾರು ಗ್ರಾಹಕರು ಠೇವಣಿ ಇಟ್ಟಿದ್ದಾರೆ. ಇದಕ್ಕಾಗಿ ಗ್ರಾಹಕರ ಹಣ ಮರಳಿಸುವ ವ್ಯವಸ್ಥೆ ಕೂಡಲೇ ಆಗಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ಆದರೆ ಸುಪ್ರೀಂಕೋರ್ಟ್ ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸಿದೆ. ನೀವು ಅಗತ್ಯವಿದ್ದರೆ ಹೈಕೋರ್ಟ್ ಗೆ ಹೋಗಬಹುದು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next