Advertisement

ಗೋಸ್ವರ್ಗದಲ್ಲಿ ಗೋವಿಗಾಗಿ ಆಲೆಮನೆ ಕಾರ್ಯಕ್ರಮ

05:05 PM Jan 15, 2022 | Team Udayavani |

 ಸಿದ್ದಾಪುರ: ತಾಲೂಕಿನ ಭಾನ್ಕುಳಿಯ ಶ್ರೀರಾಮದೇವ ಮಠ ಆವಾರದ ಗೋ ಸ್ವರ್ಗದಲ್ಲಿ ಗೋದಿನದ ಹೆಸರಿನಲ್ಲಿ ಒಂದು ವಾರಗಳ ಕಾಲ ಗೋವಿಗಾಗಿ ಆಲೆಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

ಶ್ರೀಮಠದ ಹಿರಿಯ ಕಾರ್ಯಕರ್ತ ಗಣಪತಿ ವೆಂಕಟ್ರಮಣ ಹೆಗಡೆ ಕುಂಬಾರಕುಳಿ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ ಗುಂಜಗೋಡ, ಆಲೆಮನೆ ಅನುಭವಿ ಆರ್‌.ಜಿ. ಹೆಗಡೆ ಕಲ್ಲಾರೆಮನೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್‌.ಎಸ್‌. ಹೆಗಡೆ ಹರಗಿ, ವಿವಿಧ ಸಮಿತಿಗಳ ಎಂ.ಜಿ. ರಾಮಚಂದ್ರ ಮರ್ಡುಮನೆ, ಎಂ.ಎಂ. ಹೆಗಡೆ ಮಗೇಗಾರ, ಎಂ.ವಿ. ಹೆಗಡೆ ಮುತ್ತಿಗೆ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಇತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗೋವಿಗಾಗಿ ಆಲೆಮನೆ ಒಂದು ವಾರಗಳ ಕಾಲ ನಡೆಯಲಿದ್ದು ಕೊವಿಡ್‌ ನಿಯಮ ಪಾಲಿಸಿ ಗೋ ಭಕ್ತರು ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡು ಗೋಸೇವೆಯಲ್ಲಿ ಕೈಜೋಡಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next