Advertisement
ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳ ಸಭೆಯಲ್ಲಿ ನೀಡಲಾದ ಜಿಲ್ಲಾವಾರು ಮೇವು ಸಂಗ್ರಹದ ಮಾಹಿತಿಯನ್ನು ಮುಖ್ಯ ಮಂತ್ರಿಯವರು ಒಪ್ಪದೆ, ಹಳ್ಳಿಗಳಲ್ಲಿ ರೈತರ ಮನೆ ಮನೆ ಸಮೀಕ್ಷೆ ನಡೆಸಿ, ಯಾವ ರೈತರ ಬಳಿ ಹುಲ್ಲಿದೆ, ಯಾರ ಬಳಿ ಇಲ್ಲ ಎಂಬ ಮಾಹಿತಿಯನ್ನು ಸಂಗ್ರಹಿಸುವಂತೆ ಸೂಚಿಸಿದ್ದಾರೆ.
Related Articles
Advertisement
ಇನ್ನು ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಯಲ್ಲಿ ಮೇವು ಬ್ಯಾಂಕ್ ತೆರೆಯಲು ಹುಲ್ಲು ದಾಸ್ತಾನು ಮಾಡಲಾಗಿದ್ದರೂ ಗಣ್ಯರಿಗೋಸ್ಕರ ಕಾಯುತ್ತಾ ವಿಳಂಬ ಮಾಡುತ್ತಿರುವ ಬಗ್ಗೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದಮೂರ್ತಿ ಅಸಮಾಧಾನ ವ್ಯಕ್ತಪಡಸಿದರು. ಮಧ್ಯಪ್ರವೇಶಿಸಿದ ಸಿಇಒ, ಕಸುವಿನಹಳ್ಳಿಯಲ್ಲಿ ಶುಕ್ರವಾರವೇ ಮೇವು ಬ್ಯಾಂಕ್ ಆರಂಭಿಸಲು ತಾಪಂ ಅಧಿಕಾರಿಗೆ ಸೂಚನೆ ನೀಡಿದರು.
ಸೇರ್ಪಡೆ – ಮಾರ್ಪಾಡು: ತಾಪಂ ಯೋಜನೆಯಡಿ ಶಿಕ್ಷಣ ಇಲಾಖೆಯ ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮದಲ್ಲಿ ಎಚ್.ಡಿ. ಕೋಟೆ ತಾಲೂಕಿಗೆ 6.75 ಲಕ್ಷ ರೂ. ಬಿಡುಗಡೆಯಾಗಿದ್ದು, 12 ಕಾಮಗಾರಿ ಗಳಲ್ಲಿ 4 ಪೂರ್ಣಗೊಂಡಿದ್ದು, 8 ಪ್ರಗತಿ ಯಲ್ಲಿವೆ. ಹುಣಸೂರು ತಾಲೂಕಿಗೆ 6.50 ಲಕ್ಷ ರೂ. ಬಿಡುಗಡೆಯಾಗಿದ್ದು, 6 ಕಾಮಗಾರಿಗಳಲ್ಲಿ 4 ಪೂರ್ಣಗೊಂಡಿದೆ. ಕೆ.ಆರ್. ನಗರ ತಾಲೂಕಿಗೆ 6.50 ಲಕ್ಷ ಬಿಡುಗಡೆಯಾಗಿದ್ದು, 8 ಕಾಮಗಾರಿಯಲ್ಲಿ 3 ಮಾತ್ರ ಪ್ರಗತಿಯಲ್ಲಿದೆ.
ಪಿರಿಯಾಪಟ್ಟಣ ತಾಲೂಕಿಗೆ 6.75 ಲಕ್ಷ ಬಿಡುಗಡೆಯಾಗಿದ್ದು, 7 ಕಾಮಗಾರಿಗಳಲ್ಲಿ 2 ಪೂರ್ಣಗೊಂಡಿದ್ದು, 5 ಕಾಮಗಾರಿ ಪ್ರಗತಿ ಯಲ್ಲಿದೆ. ನಂಜನಗೂಡು ತಾಲೂಕಿಗೆ 7 ಲಕ್ಷ ರೂ. ಬಿಡುಗಡೆ ಯಾಗಿದ್ದು, 7 ಕಾಮಗಾರಿಗಳಲ್ಲಿ 6 ಪ್ರಗತಿ ಯಲ್ಲಿವೆ. ತಿ.ನರಸೀಪುರ ತಾಲೂಕಿಗೆ 6.50 ಲಕ್ಷ ಬಿಡುಗಡೆ ಯಾಗಿದ್ದು, 6 ಕಾಮಗಾರಿಗಳಲ್ಲಿ 3 ಪೂರ್ಣ ಗೊಂಡಿದ್ದು, 3 ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದಮೂರ್ತಿ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಜರಿದ್ದರು.
“ಸರ್ಕಾರಿ ಸೇವೆಗೆ ಅನ್‌ಫಿಟ್ ನೀನು’ತಾಲೂಕು ಪ್ಲಾನಿಂಗ್ ಆಫೀಸರ್ ಆಗಿ ಏನ್ಮಾಡ್ತಿ ನೀನು. ಕೆಲಸ ಮಾಡದೆ ಸಂಬಳ ತಗೊಂಡೊಗೋಕೆ ಬಂದಿದ್ದೀಯಾ. ಸರ್ಕಾರಿ ಸೇವೆಗೆ ಅನ್‌ಫಿಟ್ ನೀನು. ಕಡ್ಡಾಯ ನಿವೃತ್ತಿಗೆ ಶಿಫಾರಸು ಮಾಡ ಬೇಕಾಗ್ತದೆ ಎಂದು ಜಿಪಂ ಸಿಇಒ ಪಿ. ಶಿವಶಂಕರ್, ಎಚ್.ಡಿ.ಕೋಟೆ ತಾಲೂಕು ಯೋಜನಾ ಅಧಿಕಾರಿಗೆ ಎಚ್ಚರಿಕೆ ನೀಡಿದರು. ಜನವರಿ 11ರಂದು ನಡೆದ ಕೆಡಿಪಿ ಸಭೆಯ ನಡಾವಳಿ ಮೇಲಿನ ಅನುಪಾಲನಾ ವರದಿ ಮಂಡನೆ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಯೋಜನೆಯಡಿ ಶಿಕ್ಷಣ ಇಲಾಖೆಯ ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮದ ತಾಲೂಕುವಾರು ಪ್ರಗತಿ ಪರಿಶೀಲನೆ ವೇಳೆ ಎಚ್.ಡಿ.ಕೋಟೆ ತಾಲೂಕು ಯೋಜನಾಧಿಕಾರಿ, ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಸಭೆಗೆ ಬಂದಿದ್ದರು. ಅಲ್ಲದೆ ತಾಲೂಕಿಗೆ ಬಿಡುಗಡೆಯಾದ 6.75 ಲಕ್ಷ ರೂ.ಗಳ ಕಾಮಗಾರಿ ಪ್ರಗತಿಯ ಬಗ್ಗೆ ಮಾಹಿತಿ ನೀಡಲು ತಡಕಾಡುತ್ತಿರುವುದನ್ನು ಕಂಡು ಆಕ್ರೋಶಗೊಂಡ ಸಿಇಒ, ಅನು ಪಾಲನಾ ವರದಿ ನೋಡಿಕೊಂಡು ಸಭೆಗೆ ಯಾಕೆ ಬರಲ್ಲ. ಸೇರ್ಪಡೆ – ಮಾರ್ಪಡು ಕಾರ್ಯಕ್ರಮದಲ್ಲಿ 12 ಕಾಮಗಾರಿಗೆ 6.75 ಲಕ್ಷ ರೂ. ಬಿಡುಗಡೆಯಾಗಿದೆ. ಇದರ ಪ್ರಗತಿ ವರದಿ ತರದೆ ಸಭೆಗೇಕೆ ಬರಿಯಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಶಾಲಾ ಕಟ್ಟಡ ದುರಸ್ತಿಗೆ 10.40 ಕೋಟಿ ರೂ.
ಡಿಡಿಪಿಐ ಎಚ್.ಆರ್ ಬಸಪ್ಪ ಮಾತನಾಡಿ, ಜಿಲ್ಲೆಯ ಶಾಲಾ ಕಟ್ಟಡಗಳ ದುರಸ್ತಿಗೆ 10.40 ಕೋಟಿ ರೂ. ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಒಂದೂವರೆ ತಿಂಗಳ ಹಿಂದೆಯೇ ಸಲ್ಲಿಸಲಾಗಿದೆ ಎಂದರು. ಪಶುಭಾಗ್ಯ ಯೋಜನೆಯಡಿ ಎಚ್.ಡಿ. ಕೋಟೆ, ಕೆ.ಆರ್.ನಗರ ಬಿಟ್ಟು ಉಳಿದ ಐದು ತಾಲೂಕುಗಳಲ್ಲಿ ಫಲಾನುಭವಿಗಳ ಆಯ್ಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಬಾಳೆಹಣ್ಣಿನ ಜ್ಯೂಸ್ ಘಟಕ: ಬಾಳೆಹಣ್ಣಿನ ಜ್ಯೂಸ್ ತಯಾರಿಕಾ ತರಬೇತಿಯನ್ನು ಸಿಎಫ್ಟಿಆರ್‌ಐನಲ್ಲಿ ಜಿಲ್ಲಾ ಎಲ್ಲಾ ಏಳು ತಾಲೂಕುಗಳ 7 ಇಲಾಖಾ ಅಧಿಕಾರಿಗಳು ಸೇರಿದಂತೆ 28 ಜನ ರೈತರಿಗೆ ತರಬೇತಿ ಕೊಡಿಸಲಾಗಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಟೋನ್‌ಮಿಲ್ಕ್ ಮಾದರಿಯಲ್ಲಿ ಬಾಳೆಹಣ್ಣಿನ ಜ್ಯೂಸ್ ಮಾರಾಟ ಮಾಡುವ ಯೋಜನೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ವಿವರಿಸಿದರು. ಬೇಡಿಕೆ ನೋಡಿಕೊಂಡು ಮಾಡಿ, ಯಶಸ್ಸುಕಂಡರೆ ಮುಂದುವರಿಸಿ, ಇಲ್ಲವಾದರೆ ಬೇಡ. ಅದಕ್ಕಾಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಘಟಕ ಆರಂಭಿಸುವಂತೆ ಸಿಇಒ ಸಲಹೆ ನೀಡಿದರು.