Advertisement

ಗೋ ಸಂಪತ್ತು ಉಳಿಸಿ-ಬೆಳೆಸಿ: ಮಾಮನಿ

04:06 PM Dec 07, 2020 | Adarsha |

ಮುನವಳ್ಳಿ: ಸಮೀಪದ ಶಿಂದೋಗಿಯ ಹನಸಿಯವರ ತೋಟದ ಗೋಕೈಲಾಸ ಮಂದಿರದಲ್ಲಿ ನೂತನ ಶ್ರೀ ಜಗದ್ಗುರು ರೇಣುಕಾಚಾರ್ಯ ಗೋಶಾಲೆಯ ಉದ್ಘಾಟನೆ ಹಾಗೂ ಶ್ರೀ ಸೋಮಯಾಗ ಮಂಟಪದ ಅಡಿಪಾಯ ಭರ್ತಿ ಕಾರ್ಯಕ್ರಮ ಜರುಗಿತು.

Advertisement

ಗೋಶಾಲೆ ಉದ್ಘಾಟಿಸಿ ಮಾತನಾಡಿದ ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಗೋವು ಕಾಮಧೇನುವಾಗಿದ್ದು ಗೋ ಸಂಪತ್ತನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗೋಶಾಲೆಗಳು ಇನ್ನೂ ಹೆಚ್ಚೆಚ್ಚು ನಿರ್ಮಾಣವಾಗಲಿ. ಈ ಗೋಶಾಲೆಯ ಅಭಿವೃದ್ಧಿಗೆ ಸರಕಾರದಿಂದ ಅನುದಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ, ಗೋ ಹತ್ಯೆ ನಿಷೇಧ ಕಾಯ್ದೆ ಶೀಘ್ರವಾಗಿ ಜಾರಿಗೆ ಬರಲಿ ಎಂದು ಆಶಿಸಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಎಂ.ಚಂದರಗಿಯ ಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಗೋಮೂತ್ರ ಸೇವನೆಯಿಂದ ಕೊರೊನಾ ಸೇರಿದಂತೆ ಅನೇಕ ರೋಗಗಳು ವಾಸಿಯಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಹಸುವಿನಿಂದ ಪಡೆಯುವ ಎಲ್ಲವೂ ಮನುಷ್ಯನ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಗೋವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.

ಇದನ್ನೂ ಓದಿ:ಗ್ರಾಪಂ ಚುನಾವಣೆಗೆ ದಿನಗಣನೆ ಆರಂಭ

Advertisement

ನೇತೃತ್ವ ವಹಿಸಿದ್ದ ಮುನವಳ್ಳಿ ಸೋಮಶೇಖರಮಠದ ಶ್ರೀ ಮುರುಘೇಂದ್ರ ಸ್ವಾಮಿಗಳು ಹಾಗೂ ಶ್ರೀ ಮುಕ್ತಾನಂದ ಸ್ವಾಮಿಗಳು ಮಾತನಾಡಿದರು. ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಸವದತ್ತಿ ತಾಲೂಕಾ ಅರಣ್ಯ ಸಂರಕ್ಷಣಾಧಿ ಕಾರಿ ಸುನೀತಾ ನಿಂಬರಗಿ ಹಾಗೂ ಸವದತ್ತಿ ಪಿ.ಎಸ್‌.ಐ. ಶಿವಾನಂದ ಗುಡಗನಟ್ಟಿ ಇವರನ್ನು ಸನ್ಮಾನಿಸಲಾಯಿತು.

ಟಿ.ಪಿ.ಮನೋಳಿ, ತಾ.ಪಂ.ಅಧ್ಯಕ್ಷ ವಿನಯಕುಮಾರ ದೇಸಾಯಿ, ಪಿ.ಎಲ್‌.ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ಪಂಚಪ್ಪ ಹನಸಿ, ಬಾಳೇಶ ಸಾವಳಗಿ, ಅಂಬರೀಷ ಯಲಿಗಾರ, ಸಿ.ಬಿ.ಬಾಳಿ, ರಮೇಶ ಗೋಮಾಡಿ, ಭವರಸಿಂಗ್‌ ಪರಿವಾರ, ಚಂದ್ರು ಜಂಬ್ರಿ, ಮಂಜು ಹನಸಿ, ಅಲ್ಲಪ್ಪ ಚುಳಕಿ, ಅಶೋಕ ತಿರಕನ್ನವರ, ಬಸಪ್ಪ ಹನಸಿ, ಶಂಕ್ರಯ್ಯ ಹಿರೇಮಠ, ಪರಪ್ಪ ಸಿದ್ನಾಳ, ಮಲ್ಲಿಕಾರ್ಜುನ ನಲವಡೆ, ಪ್ರಸಾದ ವಿರುಪಯ್ಯನವರಮಠ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next