Advertisement

ಸಂಸತ್ತಲ್ಲಿ ಗೋ ಕೋಲಾಹಲ

03:45 AM Apr 07, 2017 | Team Udayavani |

ನವದೆಹಲಿ/ಜೈಪುರ: ರಾಜಸ್ಥಾನದ ಅಳ್ವಾರ್‌ ಜಿಲ್ಲೆಯ ಗ್ರಾಮದಲ್ಲಿ ಗೋರಕ್ಷಕರಿಂದ ಥಳಿತಕ್ಕೊಳಗಾಗಿ ವ್ಯಕ್ತಿ ಅಸುನೀಗಿದ ಪ್ರಕರಣ ರಾಜ್ಯಸಭೆ, ಲೋಕಸಭೆಗಳಲ್ಲಿ ಕೋಲಾಹಲ ಎಬ್ಬಿಸಿತು. ಈ ನಡುವೆ ಆಳ್ವಾರ್‌ನಲ್ಲಿ ಅಸುನೀಗಿದ ವ್ಯಕ್ತಿ ದನ ಸಾಗಿಸುವ ವ್ಯಕ್ತಿ ಅಲ್ಲ. ಆತ ಹಾಲು ಮಾರಾಟಕ್ಕೆ ತೆರಳಿದ್ದಾತ ಎಂಬ ಅಂಶ ಗೊತ್ತಾಗಿದೆ. ಹೈನು ವಹಿವಾಟು ಹೆಚ್ಚಿಸುವ ನಿಟ್ಟಿನಲ್ಲಿ ದನಗಳನ್ನು ಖರೀದಿಸಿ ತೆರಳುತ್ತಿದ್ದ.

Advertisement

ಗುರುವಾರ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರ ಪ್ರಸ್ತಾಪಿಸಿ ದರು. ಎರಡೂ ಗುಂಪಿನವರದ್ದು ತಪ್ಪುಗಳಿಗೆ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಲಾಗದು ಎಂದು ರಾಜಸ್ಥಾನ ಗೃಹ ಸಚಿವರು ನೀಡಿದ ಹೇಳಿಕೆಯನ್ನು ಅವರು ಖಂಡಿಸಿದರು. ಇದರ ಜತೆಗೆ ರಾಜಸ್ಥಾನದಲ್ಲಿ ಗೋರಕ್ಷಣೆಯ ನೆಪದಲ್ಲಿ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತದೆ ಎಂದು  ಖರ್ಗೆ ಟೀಕಿಸಿದರು. ಆದರೆ ರಾಜಸ್ಥಾನ ಗೃಹ ಸಚಿವರನ್ನು ಸಮರ್ಥಿಸಿಕೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಪ್ರಕರಣಕ್ಕೆ ಸಂಬಂಧಪಟ್ಟು ಅವರು ಆ ರೀತಿ ಮಾತನಾಡಿದ್ದಾರೆಂದರು.

ಕಾಂಗ್ರೆಸ್‌ ನಾಯಕ  ಖರ್ಗೆ ಮಾತನಾಡುವ ವೇಳೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದರು. ಈ ನಡುವೆ ಕೆಲವು ಹಿಂದೂ ಸಂಘಟನೆಗಳ ಹೆಸರನ್ನು ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿ ದರೂ, ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅದನ್ನು ಕಡತದಿಂದ ತೆಗೆದುಹಾಕಿದರು.

ರಾಜ್ಯಸಭೆಯಲ್ಲಿ: ಈ ನಡುವೆ ರಾಜ್ಯಸಭೆಯಲ್ಲಿಯೂ ಕೂಡ ಥಳಿತ ಪ್ರಕರಣ ಗದ್ದಲಕ್ಕೆ ಕಾರಣವಾಯಿತು. ಉಪಸಭಾಪತಿ ಪಿ.ಜೆ.ಕುರಿಯನ್‌ ಅಳ್ವಾರ್‌ನಲ್ಲಿ ಏನು ಘಟನೆ ನಡೆದಿದೆ ಎಂಬ ಬಗ್ಗೆ ಸಮಗ್ರ ವಿವರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ವಿಚಾರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಕಾಂಗ್ರೆಸ್‌ ಸದಸ್ಯ ಮಧುಸೂಧನ ಮಿಸಿŒ ವಿಚಾರ ಪ್ರಸ್ತಾಪಿಸಿ ರಾಜಸ್ಥಾನದಲ್ಲಿ ಕಾನೂನು ಮತ್ತು ಶಿಸ್ತು ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಆರೋಪಿಸಿದರು. ಗೋರಕ್ಷಕರು ಒಂದು ಗುಂಪಿಗೆ ಸೇರಿದ ವ್ಯಕ್ತಿಯನ್ನು ಅನುವು ಮಾಡಿದ್ದಾರೆ. ಮತ್ತೂಂದು ಗುಂಪಿಗೆ ಸೇರಿದಾತನನ್ನು ಮಾರಣಾಂತಿಕವಾಗಿ ಥಳಿಸಿ ಆತ ಆಸ್ಪತ್ರೆಯಲ್ಲಿ ಅಸುನೀಗುವಂತೆ ಮಾಡಿದ್ದಾರೆ ಎಂದರು. 

ಅದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಮುಕ್ತಾರ್‌ ಅಬ್ಟಾಸ್‌ ನಖೀÌ ಅಳ್ವಾರ್‌ನಲ್ಲಿ ಅಂಥ ಘಟನೆಯೇ ನಡೆದಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಬಳಿಕ ಮಾತನಾಡಿದ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಸಚಿವರಿಗೆ ಮಾಹಿತಿಯೇ ಇಲ್ಲ ಎಂದು ಟೀಕಿಸಿದರು. ಈ ಘಟನೆಯನ್ನು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಕೂಡ ಪ್ರಕಟಿಸಿದೆ ಎಂದರು. 

Advertisement

ವಿರೋಧಿಸುವವರಿಗೆ ಜಾಗವಿಲ್ಲ!: “ಪ್ರಧಾನಿ ಮೋದಿ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ. ಅವರ ಆಡಳಿತದಲ್ಲಿ ಬೇರೆಯವರ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲ. ಮೋದಿ ಹಾಗೂ ಆರ್‌ಎಸ್‌ಎಸ್‌ ಅನ್ನು ವಿರೋಧಿಸುವವರಿಗೆ ದೇಶದಲ್ಲಿ ಜಾಗವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಮೋದಿ ಜಿ ಹೊಸ ದೃಷ್ಟಿಕೋನವೊಂದನ್ನು ದೇಶದಲ್ಲಿ ಬಿತ್ತುತ್ತಿದ್ದಾರೆ,’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಬಳಿಕ ಸಂಸತ್‌ ಆವರಣದಲ್ಲಿ ಮಾತನಾಡಿದ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೋರಕ್ಷಣೆ ಸರ್ಚಾರ್ಜ್‌ ಶೇ.10ರಷ್ಟು ಹೆಚ್ಚಳ 
ರಾಜಸ್ಥಾನ ಸರ್ಕಾರ ಗೋರಕ್ಷಣೆಗೆ ಸಂಬಂಧಿಸಿದ ಸರ್ಚಾರ್ಜ್‌ನಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಗೋರಕ್ಷಣೆ ಮಾಡುವವರಿಗೆ ಅದೊಂದು ವೆಚ್ಚದಾಯಕವಾಗಲಿದೆ. ಈ ಬಗ್ಗೆ ಸ್ಟಾಂಪ್‌ ಪೇಪರ್‌ನಲ್ಲಿ ಒಪ್ಪಂದ ಪತ್ರ ಬರೆದುಕೊಡಬೇಕಾಗಿದೆ. 
ರಾಜಸ್ಥಾನದಲ್ಲಿ ಗೋರಕ್ಷರಿಂದ ಥಳಿತಕ್ಕೆ ಒಳಗಾಗಿ ಯಾರೂ ಅಸುನೀಗಿಯೇ ಇಲ್ಲ. 

– ಎಂ.ಎ.ನಖೀÌ, ಕೇಂದ್ರ ಸಚಿವ

ಸಚಿವರಿಗೆ ಯಾವುದೇ ಮಾಹಿತಿ ಇಲ್ಲವೆಂದು ಕಾಣುತ್ತದೆ. ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲೂ ಈ ಬಗ್ಗೆ ವರದಿ ಪ್ರಕಟವಾಗಿದೆ.
– ಗುಲಾಂ ನಬಿ ಆಜಾದ್‌, 
ಕಾಂಗ್ರೆಸ್‌ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next