Advertisement
ಪಟ್ಟಣದ ಬಾಬು ಜಗಜೀವನ ರಾಮ್ ಭವನದಲ್ಲಿ ರಾಜ್ಯ ವಿಕಲಚೇತನರ ತಾಲೂಕು ಒಕ್ಕೂಟದಿಂದ ಆಯೋಜಿಸಿದ್ದ ತಾಲೂಕುಮಟ್ಟದ ಅಂಗವಿಕಲರ ಕಾರ್ಯಕಾರಿಣಿ ಸಮಿತಿಗಳ ಬಲವರ್ಧನೆ ಅಭಿಯಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯ ಅರ್ಹತೆ ಉಳ್ಳ ಅಂಗವಿಕಲರಿಗೆ ಡಿಎಂಎಫ್ ನಿ ಧಿಯಲ್ಲಿ 150 ಮೋಟಾರ್ ಬೈಕ್‌ಗಳನ್ನು ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಶೀಘ್ರದಲ್ಲೇ ಅವುಗಳನ್ನು ವಿತರಿಸಲಾಗುವುದು ಎಂದ ಅವರು ಅಂಗವಿಕಲರು ಕುಟುಂಬಕ್ಕೆ ಹೊರೆಯಾಗದಂತೆ ಎಲ್ಲ ರಂಗಗಳಲ್ಲಿಯೂ ತೊಡಗಿಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಸಲಹೆ ನೀಡಿದರು. ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಕರಿಬಸಜ್ಜ ಮಾತನಾಡಿ, ಅಂಗವಿಕಲರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ಆರಂಭಿಸಿದ್ದೇ ಬಿಜೆಪಿ ಸರ್ಕಾರ. ಈ ಸರ್ಕಾರಕ್ಕೆ ನಮ್ಮ ಒಕ್ಕೂಟದಿಂದ ಧನ್ಯವಾದ ಅರ್ಪಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಾಪಂ ಇಒ ಕೆ. ಪ್ರಕಾಶ್, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೃಷ್ಣಪ್ಪ, ರಾಜ್ಯ ಸಂಚಾಲಕ ಜಿ. ದೇವರಾಜ್, ಸಂಯೋಜಕ ಟೇಕರಾಜ್, ರಾಜ್ಯ ನಿರ್ದೇಶಕ ಆರ್. ಧನರಾಜ್, ರುದ್ರೇಗೌಡ, ರವಿಕುಮಾರ್ ನಾಯಕ್, ಬಿ. ಮಂಜುನಾಥ್, ಎನ್.ಲಕ್ಷ್ಮಣ, ಪುರಸಭೆ ಸದಸ್ಯರಾದ ತಾರಾ ಹನುಮಂತಪ್ಪ, ಎಂ.ಕೆ. ಜಾವಿದ್, ಗೌಳಿ ವಿನಯ್, ಬಿಜೆಪಿ ಮುಖಂಡರಾದ ಬಾಗಳಿ ಕೊಟ್ರೆಶಪ್ಪ, ಕೆಂಗಳ್ಳಿ ಪ್ರಕಾಶ್, ಎಂ.ಮಲ್ಲೇಶ್, ವಕೀಲ ರೇವಣಸಿದ್ದಪ್ಪ,ಶಿವಾನಂದ ಇದ್ದರು.