Advertisement
ಶೇ. 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ 11 ರಾಜ್ಯಗಳ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆಯಾ ಜಿಲ್ಲೆಗಳು ಒಳ ಪಡುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗಿನ ವೀಡಿಯೋ ಸಂವಾದದಲ್ಲಿ ಪ್ರಧಾನಿ ಈ ಸಲಹೆ ಮಾಡಿದ್ದಾರೆ.
ಇದುವರೆಗೆ ಜನರನ್ನು ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾ ಗಿದ್ದಾರೆ. ಮುಂದಿನ ದಿನಗಳಲ್ಲಿ ಅಶಕ್ತರಿಗೆ, ಮನೆಯಿಂದ ಹೊರಬರಲು ಸಾಧ್ಯವಾಗದವರಿಗೆ ಲಸಿಕೆ ನೀಡಲು ಅವರಿದ್ದಲ್ಲಿಗೇ ತೆರಳಬೇಕಾಗಿದೆ. ಈ ಮೂಲಕ ಎಲ್ಲ ಅರ್ಹ ವಯಸ್ಸಿನವರಿಗೆ ಲಸಿಕೆ ನೀಡುವ ಗುರಿ ಸಾಧಿಸಬೇಕು ಮತ್ತು ಸೋಂಕನ್ನು ಪೂರ್ಣ ಪ್ರಮಾಣದಲ್ಲಿ ಮಣಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.
Related Articles
Advertisement
ಧಾರ್ಮಿಕ ಮುಖಂಡರನ್ನು ಬಳಸಿಇನ್ನೂ ಲಸಿಕೆಗೆ ಬಾಕಿ ಇರುವವರು ಹಾಕಿಸಿ ಕೊಳ್ಳು ವಂತೆ ಮತ್ತು ಹಲವು ಭಾಗಗಳಲ್ಲಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಲು ಆಯಾ ಪ್ರದೇಶದ ಧಾರ್ಮಿಕ ಮುಖಂಡರನ್ನು ಬಳಸಬೇಕು ಎಂದು ಪ್ರಧಾನಿ ಸಲಹೆ ಮಾಡಿದರು. ಕೆಲವು ಪ್ರದೇಶಗಳಲ್ಲಿ ಮೊದಲ ಡೋಸ್ ಪಡೆಯದವರೂ ಇದ್ದಾರೆ. ಅವರನ್ನು ಗುರುತಿಸಿ ಲಸಿಕೆ ಹಾಕುವ ಬಗ್ಗೆ ಮುತು ವರ್ಜಿ ವಹಿಸಬೇಕಾಗಿದೆ ಎಂದರು. “100 ವರ್ಷಗಳಿಗೆ ಹೋಲಿಸಿದರೆ ಇದೊಂದು ದೊಡ್ಡ ಪಿಡುಗು ಮತ್ತು ಅದರಿಂದಾಗಿ ಹಲವು ರೀತಿಯ ಸವಾಲುಗಳು ಎದುರಾಗಿವೆ. ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶದಲ್ಲಿ ಹಲವು ಪರಿಹಾರಗಳು, ವಿನೂತನ ಪದ್ಧತಿಗಳ ಆವಿಷ್ಕಾರದ ಮೂಲಕ ಸಮಸ್ಯೆ ನಿಭಾಯಿಸಲು ಕಲಿತಿದ್ದೇವೆ. ನಿಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸುವ ಪ್ರಮಾಣ ಹೆಚ್ಚಿಸಲು ಮತ್ತು ಜನರ ಮನವೊಲಿಕೆಗೆ ಹಲವು ವಿನೂತನ ಕ್ರಮಗಳನ್ನು ಸ್ಥಳೀಯ ಆಡಳಿತ ಕೈಗೊಳ್ಳಬೇಕು’ ಎಂದರು. ಅ. 29ರಿಂದ ನ. 2ರ ವರೆಗೆ ಪ್ರಧಾನಿ ಇಟೆಲಿ ಮತ್ತು ಯುನೈಟೆಡ್ ಕಿಂಗ್‌ಡಮ್ ಪ್ರವಾಸದಲ್ಲಿದ್ದರು. ನ. 2ರಂದು ಪ್ರವಾಸದಿಂದ ಸ್ವದೇಶಕ್ಕೆ ವಾಪಸಾದ ತತ್‌ಕ್ಷಣವೇ ಲಸಿಕೆ ಹಾಕಿಸುವಲ್ಲಿ ನಿರೀಕ್ಷಿತ ಸಾಧನೆ ಮಾಡದ ಜಿಲ್ಲೆಗಳ ಜಿಲ್ಲಾಧಿ ಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದು ಮಹತ್ವ ಪಡೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಹಲವರು ಇದ್ದರು.